ಮಂಜೇಶ್ವರ: ಮೀಯಪದವು ಶ್ರೀವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾ¯ಯಲ್ಲಿ 2022- 2023 ನೇ ಶೈಕ್ಷಣಿಕ ವರ್ಷದ ಕಲಿಕೋತ್ಸವವು ಜರಗಿತು. ವಾರ್ಡ್ ಸದಸ್ಯೆ ರುಖಿಯಾ ಸಿದ್ಧಿಕ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶಿವಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜನಾರ್ಧನ ಮತ್ತು ಮಾತೃಸಂಘದ ಅಧಕ್ಷೆ ಶೋಭಾ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದು, ಶುಭಹಾರೈಸಿದರು. ಹಿರಿಯ ಅಧ್ಯಾಪಿಕೆ ಲಲಿತಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕಲಿಕೆಯ ಮಹತ್ವದ ಕುರಿತಾಗಿ ತಿಳಿಸಿದರು. ಹಿರಿಯ ಅಧ್ಯಾಪಕರಾದ ರಾಜಾರಾಮ ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಭಿಜ್ಞಾ ಸ್ವಾಗತಿಸಿ, ರೆಹನಾ ವಂದಿಸಿದರು. ಆಶಾ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳು ನಡೆದವು.
ಮೀಯಪದವಲ್ಲಿ ಕಲಿಕೋತ್ಸವ ಆಚರಣೆ
0
ಏಪ್ರಿಲ್ 01, 2023