ಬದಿಯಡ್ಕ : ಬೆಂಗಳೂರಿನ ಜಾಗೃತಿ ಸೇವಾ ಟ್ರಸ್ಟ್ ಸೇವಾ ಸಂಸ್ಥೆಯ ಆಶ್ರಯದಲ್ಲಿ ಮತ್ತು ಎಡನೀರು ಮಠದ ಸಹಕಾರದಲ್ಲಿ 'ಗಡಿನಾಡಿನಲ್ಲಿ ಕನ್ನಡ ಜಾಗೃತಿ' ಎಂಬ ಉದ್ದೇಶದೊಂದಿಗೆ ಇತ್ತೀಚೆಗೆ ಎಡನೀರು ಮಠದಲ್ಲಿ ಕನ್ನಡ ಸಾಹಿತ್ಯ ಸಮಾವೇಶ ಸಮಾರಂಭದಲ್ಲಿ ವೆಂಕಟ ಭಟ್ ಎಡನೀರು ಅವರಿಗೆ ಕುಂಚ ಚಿತ್ರ ಬ್ರಹ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಸಂಘಟಕರ ಪರವಾಗಿ ಪ್ರಶಸ್ತಿ ನೀಡಿ ಹರಿಸಿದರು. , ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿ ಸಂಘದ ಕಾರ್ಯದರ್ಶಿ ಗುರುರಾಜ್, ಸಮಾಜ ಸೇವಕಿ ಡಾ. ಭಾಗೀರಥಿ ಡಿ ಎಸ್ ಜ್ಯೋತಿ ರೆಡ್ಡಿ, ಮಮತಾ, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಡಾ. ಸಿ ಎಲ್ ಶಿವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ವೆಂಕಟ್ ಭಟ್ ಎಡನೀರು ಅವರಿಗೆ ಕುಂಚ ಚಿತ್ರ ಬ್ರಹ್ಮ ಪ್ರಶಸ್ತಿ ಪ್ರದಾನ
0
ಏಪ್ರಿಲ್ 20, 2023