ನವದೆಹಲಿ: ಜನಸಂಖ್ಯೆಯಲ್ಲಿ ಭಾರತ ಶೀಘ್ರದಲ್ಲೇ ಚೀನಾವನ್ನು ಹಿಂದಿಕ್ಕಿ ನಂಬರ್ 1 ಆಗಲಿದೆ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ವರದಿ ನೀಡಿತ್ತು.
ಇದೇ ವಿಚಾರವಾಗಿ ಜರ್ಮನಿಯ Der Spiegel ಎಂಬ ಮ್ಯಾಗ್‌ಜಿನ್ ಒಂದರಲ್ಲಿ ಬಂದಿರುವ ಕಾರ್ಟೂನ್ (ವ್ಯಂಗ್ಯಚಿತ್ರ) ಭಾರತೀಯರ ಕೆಂಗೆಣ್ಣಿಗೆ ಗುರಿಯಾಗಿದೆ.
ಕಾರ್ಟೂನ್ ರಚಿಸುವ ಭರದಲ್ಲಿ ಭಾರತವನ್ನು ವ್ಯಂಗ್ಯ ಮಾಡಲಾಗಿದೆ ಎನ್ನಲಾಗಿದ್ದು ಇದು ಅನೇಕ ಭಾರತೀಯರನ್ನು ಕೆರಳಿಸಿದೆ.
ಚೀನಿಯರು ಬುಲೆಟ್ ಟ್ರೈನ್‌ನಲ್ಲಿ ಹೋಗುತ್ತದ್ದರೆ, ಅದರ ಪಕ್ಕ ಭಾರತೀಯರು ಹಳೆಯ ರೈಲಿನ ಮೇಲೆ ಕುಳಿತು ಬುಲೆಟ್ ಟ್ರೈನ್ ಅನ್ನು ಹಿಂದಿಕ್ಕುತ್ತಿರುವಂತೆ ವ್ಯಂಗ್ಯ ಚಿತ್ರ ಬಿಡಿಸಲಾಗಿದೆ.
ಈ ಬಗ್ಗೆ ಖಂಡನೆ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹೆಗಾರ ಕಾಂಚನ್ ಗುಪ್ತಾ, ಪ್ರೀತಿಯ ಜರ್ಮನಿ ಇದು ಜನಾಂಗೀಯ ನಿಂದನೆಯ ಅತಿರೇಕವಾಗಿದೆ. ಇದು ವಾಸ್ತವಾಂಶವನ್ನು ತಿರುಚಿ ಚೀನಾವನ್ನು ಹೆಚ್ಚುಗಾರಿಕೆಯಿಂದ ತೋರಿಸುವುದು, ಭಾರತವನ್ನು ಅವಮಾನ ಮಾಡುವ ಕಲ್ಪನೆ ಹೊಂದಿದೆ. ಇದು ನನ್ನ ಪ್ರಕಾರ ಅತ್ಯಂತ ಕೆಟ್ಟ ಕಾರ್ಟೂನ್. ನೆನಪಿರಲಿ, ಭಾರತ ಮಂಗಳಯಾನ ಕೈಗೊಂಡ ದೇಶ ಎಂಬುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಿಚೆಲ್ ಮಾಖಲ್ ಎನ್ನುವರು ಕಾರ್ಟೂನ್ ಬಿಡಿಸಿದ ವ್ಯಕ್ತಿ, ಬಹುಶಃ ಬಾಂಗ್ಲಾದೇಶವನ್ನು ಭಾರತ ಎಂದು ತಿಳಿದುಕೊಂಡಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.