ಕಾಸರಗೋಡು: ಕೂಡ್ಲು ಮನ್ನಿಪ್ಪಾಡಿ ಗಣೇಶನಗರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ 32ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮಧೂರು ಬ್ರಹ್ಮಶ್ರೀ ತಂತ್ರಿವರ್ಯ ಪುರೋಹಿತ ರತ್ನ ಬಿ.ಕೇಶವ ಆಚಾರ್ಯರ ನೇತೃತ್ವದಲ್ಲಿಜರುಗಿತು.
ಕಾರ್ಯಕ್ರಮದ ಅಂಗವಗಿ ಗಣಪತಿ ಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ತುಲಾಭಾರ ಸೇವೆ, ಚಂಡಿಕ ಹೋಮ, ಸರ್ವಾಲಂಕಾರ ಪೂಜೆ, ದೀಪಾಲಂಕಾರ ಸಹಿತ ರಂಗ ಪೂಜೆ, ಹಾಗೂ ಗುಳಿಗನ ಕೋಲ ಮತ್ತು ಕೊರತಿ ದೈವದ ಕೋಲ ನಡೆಯಿತು. ಶ್ರೀ ದುರ್ಗಾಪರಮೇಶ್ವರಿ ಬಾಲ ಗೋಕುಲದ ಮಕ್ಕಳಿಂದ ಹಾಗೂ ಮಹಿಳಾ ಸಮಿತಿಯವರಿಂದ ಕುಣಿತ ಭಜನೆಯು ಜರಗಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಬಾಲ ಗೋಕುಲದ ಮಕ್ಕಳು ಮತ್ತು ಊರ ಕಲಾವಿದರಿಂದ ನೃತ್ಯ, ಶ್ರೀ ದುರ್ಗಾಪರಮೇಶ್ವರಿ ಭಕ್ತವೃಂದ ಗಣೇಶ ನಗರ ಇವರ ಪ್ರಾಯೋಜಕತ್ವದಲ್ಲಿ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಕೂಡ್ಲುಮೆಳ ಇವರಿಂದ, "ಶ್ರೀದೇವಿ ಮಹಾತ್ಮೆ " ಯಕ್ಷಗಾನ ಬಯಲಾಟ ಪ್ರದಸ್ನಗೊಂಡಿತು.
ಮನ್ನಿಪ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಪ್ರತಿಷ್ಠಾ ಮಹೋತ್ಸವ, ದೈವ ಕೋಲ
0
ಏಪ್ರಿಲ್ 06, 2023