HEALTH TIPS

ಕವಿಯು ಮೊದಲು ಕಿವಿಯಾಗಬೇಕು: ಶೇಖರ ಅಜೆಕಾರ್



             ಬದಿಯಡ್ಕ :'ಕವಿಯಾದವನು ಸಾಹಿತ್ಯವನ್ನು ಆಲಿಸಬೇಕು. ಕವನಗಳು ಬದುಕಿನ ಹಾಗೂ ಮಾನಸಿಕ ಕ್ಷೇತ್ರದ ಮಾತುಗಳು. ಅವುಗಳಲ್ಲಿನ ವಿಚಾರಗಳು ಮಾನವನ ಅಂತರಂಗಕ್ಕೆ ಇಳಿದು ಶುದ್ಧ ಮಾಡಬೇಕು. ಕವನಗಳಲ್ಲಿನ ವಿಚಾರಗಳು ಮಾನವರ ಸಾಮಾಜಿಕ ಬದುಕಿಗೆ ದಾರಿದೀಪವಾಗಬೇಕು.' ಎಂದು ಹಿರಿಯ ಪತ್ರಕರ್ತ, ಸಂಘಟಕ  ಶೇಖರ ಅಜೆಕಾರ್ ಹೇಳಿದರು.
         ಅವರು ಶನಿವಾರ ಎಡನೀರು ಮಠದ ಪರಿಸರದಲ್ಲಿ ಬೆಂಗಳೂರಿನ ಜಾಗೃತಿ ಟ್ರಸ್ಟ್ ಸೇವಾ ಸಂಸ್ಥೆಯ ಆಶ್ರಯದಲ್ಲಿ ಹಾಗೂ ಎಡನೀರು ಮಠದ ಸಹಕಾರದಲ್ಲಿ ನಡೆದ 'ಗಡಿನಾಡಿನಲ್ಲಿ ಕನ್ನಡ ಜಾಗೃತಿ' ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
         'ಸರಳವಾದ ಕವನಗಳು ಕೇಳುಗರಿಗೆ ಸುಲಭವಾಗಿ ಅರ್ಥವಾಗುತ್ತದೆ. ಕವಿಗೋಷ್ಠಿಯೂ ಸೇರಿದಂತೆ ಕನ್ನಡ ಸಾಹಿತ್ಯದ ಚಟುವಟಿಕೆಯಲ್ಲಿ ಶೇಖಡಾ 20ರಷ್ಟು ಹೊಸ ಸಾಹಿತಿಗಳಿಗೆ ಅವಕಾಶ ನೀಡಬೇಕು. ಇದರಿಂದ ಕನ್ನಡ ಭಾಷೆ ಬೆಳೆಯುತ್ತದೆ ಹಾಗೂ ಯುವ ಜನಾಂಗಕ್ಕೆ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹಾಗೂ ಪ್ರೀತಿ ಮೂಡುತ್ತದೆ' ಎಂದು ಅವರು ಹೇಳಿದರು. ಕವಿಗೋಷ್ಠಿಯಲ್ಲಿ ಪ್ರಣತಿ ಎನ್ ಪುದುಕೋಳಿ, ಪ್ರಸ್ತುತಿ ಪಿ ನೀರ್ಚಾಲು, ಪ್ರಣಮ್ಯ ಎನ್ ಪುದುಕೋಳಿ, ಪುಂಡೂರು ಪ್ರಭಾವತಿ ಕೆದಿಲಾಯ, ನಾರಾಯಣ ನಾಯ್ಕ ಕುದುಕ್ಕೋಳಿ, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ವಿರಾಜ್ ಅಡೂರು, ಜಯಾನಂದ ಪೆರಾಜೆ, ಆದ್ಯಂತ್ ಅಡೂರು, ಶಾಂತಾ ಪುತ್ತೂರು, ವೆಂಕಟ್ ಭಟ್ ಎಡನೀರು, ಗುರುರಾಜ್ ಕಾಸರಗೋಡು, ಡಾ. ವಾಣಿಶ್ರೀ ಕಾಸರಗೋಡು, ಸೌಮ್ಯ ಜಿ ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಕೂಡಾ ಜಾಗೃತಿ ಟ್ರಸ್ಟ್ ಸೇವಾ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries