ಬದಿಯಡ್ಕ: ರಾಜ್ಯ ಸರ್ಕಾರವು ಅನಿಯಮಿತವಾದ ತೆರಿಗೆಯನ್ನು ಹೇರುತ್ತಿರುವುದರ ವಿರುದ್ಧ ಯುಡಿಎಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬದಿಯಡ್ಕ ಬಸ್ ತಂಗುದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಗ್ರಾಮಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ನಡೆದ ಧರಣಿಯನ್ನು ಯುಡಿಎಫ್ ಮುಖಂಡ ಮಾಹಿನ್ ಕೇಳೋಟ್ ಉದ್ಘಾಟಿಸಿ ಮಾತನಾಡಿ, ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರವು ಜನಸಾಮಾನ್ಯರ ಜೇಬಿಗೆ ಕತ್ತರಿಯನ್ನಿಡುತ್ತಿದೆ. ಕೂಲಿ ಮಾಡಿ ಬದುಕುವ ಬಡಜನರು ಕಟ್ಟುವ ಸಣ್ಣ ಸಣ್ಣ ಮನೆಗಳನ್ನು ಕಟ್ಟಲು ಪರವಾನಿಗೆ ಪಡೆಯಲು ಸಾವಿರದಷ್ಟು ಮೊತ್ತವನ್ನು ತೆರಿಗೆ ರೂಪದಲ್ಲಿ ಕಟ್ಟುವಂತಹ ಪರಿಸ್ಥಿತಿ ಎದುರಾಗಿದೆ. ಎಲ್ಲಾ ವಲಯದಲ್ಲಿಯೂ ತೆರಿಗೆಯನ್ನು ಹೆಚ್ಚಳಗೊಳಿಸಲಾಗಿದ್ದು ಸಾಮಾನ್ಯ ಜನತೆ ಜೀವಿಸಲು ಅಸಾಧ್ಯವಾದಂತಾಗಿದೆ ಎಂದರು.
ಸಿ.ಎ.ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಆರ್‍ಎಸ್‍ಪಿ ಮುಖಂಡ ವಿಜಯನ್ ಕರಿವೆಳ್ಳೂರು, ಚಂದ್ರಹಾಸ ರೈ ಪೆರಡಾಲಗುತ್ತು, ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ, ರಾಮಕೃಷ್ಣ, ಎಂ.ಅಬ್ಬಾಸ್, ಹಮೀದ್, ಶಾಂತಾ ಬಾರಡ್ಕ, ಮೊಯ್ದು, ಅನ್ವರ್ ಓಸೋನ್, ಅಬ್ದುಲ್ ರಹಿಮಾನ್ ಕುಂಜಾರು, ಕುಮಾರನ್ ನಾಯರ್, ಸಿರಿಲ್ ಡಿಸೋಜ, ಕೃಷ್ಣಕುಮಾರ್, ವರ್ಗೀಸ್, ಬಾಲಕೃಷ್ಣ, ಖಾದರ್ ಮಾನ್ಯ, ಎ.ಎಸ್.ಅಹಮ್ಮದ್, ಆನಂದ ಮವ್ವಾರು, ಶ್ಯಾಮಪ್ರಸಾದ ಮಾನ್ಯ ಮೊದಲಾದವರು ನೇತೃತ್ವ ನೀಡಿದ್ದರು.