ಕಣ್ಣೂರು: ಬೆಂಗಾವಲು ವಾಹನ ರಹಿತರಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ತಮ್ಮ ಸ್ವಗ್ರಾಮದಲ್ಲಿರುವ ಮನೆಗೆ ಆಗಮಿಸಿ ಅಚ್ಚರಿ ಮೂಡಿಸಿದರು. ಎರ್ನಾಕುಳಂನಿಂದ ಮಾವೇಲಿ ಎಕ್ಸ್‍ಪ್ರೆಸ್ ನಲ್ಲಿ ಬೆಳಗ್ಗೆ 4.46ಕ್ಕೆ ತಲಶ್ಶೇರಿ ತಲುಪಿ, ಯಾವುದೇ ಬೆಂಗಾವಲುಗಳಿಲ್ಲದೆ ಪಿಣರಾಯಿಗೆ ತೆರಳಿದರು.
ಮನೆಗೆ ತೆರಳುತ್ತಿದ್ದ ಮುಖ್ಯಮಂತ್ರಿಗಳ ಬೆಂಗಾವಲು ವಾಹನಗಳು ತಲಶ್ಶೇರಿ ರೈಲ್ವೆ ಕಟ್ಟಡದಲ್ಲಿ ಸಿಲುಕಿ ಈ ಗಲಿಬಿಲಿ ಉಂಟಾಯಿತು.
ಮುಖ್ಯಮಂತ್ರಿಗಳ ವಿಐಪಿ ಭದ್ರತಾ ವಾಹನವನ್ನು ದಾಟಿದ ಬಳಿಕ ಅದರ ಹಿಂದೆಯೇ ಬಂದ ಜಿಲ್ಲಾ ಆಸ್ಪತ್ರೆಯ ಆ್ಯಂಬುಲೆನ್ಸ್ ತಲಶ್ಶೇರಿ ರೈಲು ನಿಲ್ದಾಣದ ಹಳಿಗಳೆಡೆ ಸಿಲುಕಿಕೊಂಡಿತು. ಆಗ ಮುಖ್ಯಮಂತ್ರಿಗಳ ಬೆಂಗಾವಲು ವಾಹನಗಳೂ ಬಾಕಿಯಾದವು. ಕೊನೆಗೆ ಆಂಬ್ಯುಲೆನ್ಸ್‍ನ ಟಯರ್ ನ ಗಾಳಿ ತೆಗೆದು ವಾಹನವನ್ನು ಮುಂದಕ್ಕೆ ಕೊಂಡೊಯ್ಯಲಾಯಿತು. ಮುಖ್ಯಮಂತ್ರಿ ಮನೆಗೆ ಬಂದ ನಂತರ ಅಗ್ನಿಶಾಮಕ ದಳ ಸೇರಿದಂತೆ ಇತರೆ ಬೆಂಗಾವಲು ವಾಹನಗಳು ತಡವಾಗಿ ಆಗಮಿಸಿದವು.
ಬೆಂಗಾವಲುಗಳಿಲ್ಲದೆ ಮನೆಗೆ ಆಗಮಿಸಿದ ಮುಖ್ಯಮಂತ್ರಿ
0
ಏಪ್ರಿಲ್ 02, 2023