ಕಾಸರಗೋಡು: ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ 'ಕಿಫ್‍ಬಿ' ಪ್ರಮುಖ ಪಾತ್ರ ವಹಿಸುತ್ತಿರುವುದಾಗಿ ಕೇರಳ ವಿಧಾನಸಭೆಯ ಸ್ಪೀಕರ್ ಎಎನ್ ಶಂಸೀರ್ ತಿಳಿಸಿದ್ದಾರೆ.
ಅವರು ಕುತ್ತಿಕ್ಕೋಲ್ ಪಂಚಾಯಿತಿಯ ಬೇತೂರಪಾರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಇಂದು ಎಲ್ಲಾ ರೀತಿಯ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ನಾವೀಗ ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದೇವೆ. ಶಿಕ್ಷಕರು ಹೆಚ್ಚಿನ ತಂತ್ರಗಳನ್ನು ಅಭ್ಯಾಸ ಮಾಡುವುದರ ಜತೆಗೆ ತಂತ್ರಜ್ಞಾನದ ಧನಾತ್ಮಕ ಅಂಶಗಳನ್ನು ಒಳಗೊಂಡಿರಬೇಕಾಗಿದೆ. ತ್ಯಾಜ್ಯ ನಿರ್ವಹಣೆಯನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಸ್ಪೀಕರ್ ತಿಳಿಸಿದರು. ರಾಜ್ಯ ಸರ್ಕಾರದ ವಿದ್ಯಾಕಿರಣ ಯೋಜನೆಯನ್ವಯ ಬೇತೂರುಪಾರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಕಿಫ್‍ಬಿ ನಿಧಿಯಿಂದ 1 ಕೋಟಿ ರೂ. ಬಳಸಿ ನಿರ್ಮಿಸಲಾದ ಕಟ್ಟಡ ಮಲೆನಾಡು ಪ್ರದೇಶದ ಅತ್ಯುತ್ತಮ ಶಾಲೆಯಾಗಿ ಗುರುತಿಸಲ್ಪಟ್ಟಿದೆ.
ಉದುಮ ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ವಿಶ್ರಾಂತಿಮಂದಿರ ಉದ್ಘಾಟಿಸಿದರು. ಕುತ್ತಿಕ್ಕೋಲ್ ಗ್ರಾಮ ಪಂಚಾಯಿತಿ ಸಹಾಯಕ ಅಭಿಯಂತರ ಕೆ. ಗಣೇಶನ್ ಹಾಗೂ ಪ್ರಾಂಶುಪಾಲ ರಿನಿ ಥಾಮಸ್ ವರದಿ ಮಂಡಿಸಿದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ ಮ್ಯಾಥ್ಯೂ, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಕುತ್ತಿಕ್ಕೋಲ್ ಗ್ರಾಪಂ ಅಧ್ಯಕ್ಷ ಮುರಳಿ ಪಯಂಗಾನಮ್, ಕಾಸರಗೋಡು ಶಿಕ್ಷಣ ಉಪ ನಿರ್ದೇಶಕ ಸಿ.ಕೆ.ವಾಸು, ಡಿಇಒ ನಂದಿಕೇಶನ್, ಕಾರಡ್ಕ ಬ್ಲಾಕ್ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ಸವಿತಾ ಉಪಸ್ಥಿತರಿದ್ದರು. ಎಸ್‍ಎಂಸಿ ಅಧ್ಯಕ್ಷ ಕೆ. ಮಣಿಕಂಠನ್ ಸ್ವಾಗತಿಸಿದರು. ಜಿಎಚ್‍ಎಸ್‍ಎಸ್ ಬೇತೂರಪಾರ ಪಿಟಿಎ ಅಧ್ಯಕ್ಷ ಎ. ಮಣಿಕಂಠನ್ ವಂದಿಸಿದರು.
ಮೂಲಸೌಕರ್ಯ ಅಭಿವೃದ್ಧಿಯಲ್ಲಿ'ಕಿಫ್‍ಬಿ'ಪಾತ್ರ ಮಹತ್ತರವಾದುದು-ಶಾಲಾ ಕಟ್ಟಡ ಉದ್ಘಾಟಿಸಿ ಸ್ಪೀಕರ್ ಎ.ಎನ್.ಶಂಸೀರ್ ಅಭಿಪ್ರಾಯ
0
ಏಪ್ರಿಲ್ 03, 2023
Tags