ಆಕೆಗೆ ಸುಮಾರು 36 ವರ್ಷ ಇರಬಹುದು. ರಾತ್ರಿ ವಾಹನ ಚಲಾಯಿಸಲು ಸಾಧ್ಯವಿಲ್ಲ ಎದುರಿಗೆ ಬರುವ ವಾಹನಗಳ ಹೆಡ್ಲೈಟ್ ಕಣ್ಣಿಗೆ ಕುಕ್ಕುತ್ತದೆ ಎಂದು ಆಕೆಯ ಕಂಪ್ಲೇಂಟ್. ಕೊನೆಗೆ ಆಕೆ ಈ ಬಗ್ಗೆ ದೂರನ್ನು ನೀಡುತ್ತಾಳೆ ಜೊತೆಗೆ ಪ್ರಜ್ವಲಿಸುವ ಪ್ರಕಾಶಮಾನವಾದ ಬೆಳಕನ್ನು ನೋಡುವುದಕ್ಕೆ ಸಾಧ್ಯವಿಲ್ಲ ಎಂದು ವೈದ್ಯಕೀಯ ಸಹಾಯವನ್ನು ಪಡೆಯುತ್ತಾಳೆ. 36 ವರ್ಷದ ಮಹಿಳೆಗೆ ಪ್ರಕಾಶಮಾನವಾದ ಬೆಳಕಿಗೆ ಕಣ್ಣನ್ನು ಹುಟ್ಟಿದಾಗ ತೀವ್ರವಾದ ಮೈಗ್ರೇನ್ ತಲೆನೋವು ಉಂಟಾಗುತ್ತಿತ್ತು.
ಇದರಿಂದ ಅವರ ಸಾಮಾಜಿಕ ಜೀವನದ ಮೇಲೆ ಭಾರಿ ಪರಿಣಾಮ ಬೀರಿತು. ನಂತರ ಆಕೆ ನರವೈಜ್ಞಾನಿಕ ಪರೀಕ್ಷೆ ಮಾಡಿಸುತ್ತಾರೆ. ಆಕೆ ಹೀಗೆ ಸುಖ ಸುಮ್ಮನೆ ಸಮಸ್ಯೆ ಆಗುತ್ತಿರುವುದು ಯಾಕೆ ಎಂಬುದನ್ನು ವೈದ್ಯರು ಕಂಡು ಹಿಡಿಯುತ್ತಾರೆ. ಆ ಕಾರಣ ಎಷ್ಟು ಶಾಕಿಂಗ್ ಆಗಿದೆ ಗೊತ್ತಾ? ವೈದ್ಯರು ಸರಿಯಾಗಿ ಆಕೆಯನ್ನು ತಪಾಸಣೆ ಮಾಡಿದಾಗ ಆಕೆ ದಿನಕ್ಕೆ ಎಂಟು ಗಂಟೆಗಳ ಕಾಲ ಸ್ಮಾರ್ಟ್ ಫೋನ್ ಬಳಸುತ್ತಾರೆ ಎಂಬ ವಿಷಯ ಗೊತ್ತಾಗುತ್ತದೆ. ಹೌದು, ನಾವು ಯುಟಿಲಿಟಿ ಬಿಲ್ ಪಾವತಿಸುವುದರಿಂದ ಹಿಡಿದು ರಸ್ತೆಯಲ್ಲಿ ಎಲ್ಲಾದರೂ ಹೋಗಬೇಕು ಅಂದ್ರು ನ್ಯಾವಿಗೇಟರ್ ವರೆಗೆ ಸ್ಮಾರ್ಟ್ ಫೋನ್ ಮೇಲೆ ಅವಲಂಬಿತರಾಗಿದ್ದೇವೆ.
ಸ್ಮಾರ್ಟ್ ಫೋನ್ ಎನ್ನುವುದು ನಮ್ಮ ದೇಹದ ಒಂದು ಅಂಗವೇ ಆಗಿಬಿಟ್ಟಿದೆ. ಅದನ್ನ ಬಿಟ್ಟರೆ ನಮಗೆ ಬದುಕಲು ಸಾಧ್ಯವೇ ಇಲ್ಲವೇನೋ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವರದಿಯ ಪ್ರಕಾರ ಭಾರತದಲ್ಲಿ ದಿನವೂ ಜನರು ಈ ಎವರೆಜ್ 4.9 ಗಂಟೆ ಕಣ್ಣು ಮಿಟುಕಿಸದೆ ಅಥವಾ ಕಡಿಮೆ ಕಣ್ಣನ್ನು ಮಿಟುಕಿಸಿ ಸ್ಮಾರ್ಟ್ ಫೋನ್ ಬಳಸುತ್ತಾರೆ. ಇನ್ನೊಂದಿಷ್ಟು ಜನರು ಸ್ಮಾರ್ಟ್ ಫೋನ್ ಜೊತೆಗೆ ಕಂಪ್ಯೂಟರ್, ಲ್ಯಾಪ್ಟಾಪ್ ಮೊದಲಾದ ಸ್ಕ್ರೀನ್ ಅನ್ನು ಕೂಡ ಹೆಚ್ಚು ಸಮಯ ನೋಡುತ್ತಾರೆ. ಕಣ್ಣಿನ ಬ್ಲಿಂಕಿಂಗ್ ಕೆಪ್ಯಾಸಿಟಿ ಇಂದು ಕಡಿಮೆ ಆಗಿದೆ. ಕಣ್ಣಿನ ಬ್ಲಿಂಕಿಂಗ್ ನಿಮಿಷಕ್ಕೆ 15.40 ಇರಬೇಕು. ಆದರೆ ಈಗ ನಿಮಿಷಕ್ಕೆ 8.85 ರೇಟ್ ನಷ್ಟು ಜನರು ಕಣ್ಣನ್ನು ಮಿಟುಕಿಸುತ್ತಾರೆ. ಇದು ಕಣ್ಣಿಗೆ ಎಷ್ಟು ದೊಡ್ಡ ಹಾನಿ ಉಂಟು ಮಾಡಬಹುದು ಎನ್ನುವುದು ಯಾರಿಗೂ ಕಲ್ಪನೆಯೂ ಇಲ್ಲ.
ಆಗಾಗ ಕಣ್ಣಿಗೆ ಬ್ರೇಕ್ ನೀಡಿ ಸ್ಕ್ರೀನ್ ನೋಡುವುದನ್ನ 20 ನಿಮಿಷಗಳಿಗೆ ಒಮ್ಮೆ ಬಿಡಿ. ಕಣ್ಣನ್ನು ಮಿಟುಕಿಸಿ ಎಂದು ಹೇಳಿದರೆ ಯಾರೂ ಅದನ್ನು ಕಿವಿ ಮೇಲೆ ಹಾಕಿಕೊಳ್ಳುವುದೇ ಇಲ್ಲ. ವಾರಕ್ಕೆ ಒಮ್ಮೆಯಾದರೂ ಡಿಜಿಟಲ್ ಡಿಟೆಕ್ಸ್ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ನಾವು ಆ ಮಹಿಳೆಯ ಮೇಲೆ ಸುಧಾರಿತ ಆಪ್ಟಿಕಲ್ ಅಬೇರೇಶನ್ ಹಾಗೂ ಬೈನಾಕುಲರ್ ಪ್ಯೂಷನ್ ಪರೀಕ್ಷೆ ನಡೆಸಿದ್ದೇವೆ. ಹೆಚ್ಚು ಹೊತ್ತು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಬಳಸುವುದನ್ನ ನಿಲ್ಲಿಸಿದಾಗ ಆಕೆ ಸಮಸ್ಯೆಯಿಂದ ಪರಿಹಾರ ಕಂಡುಕೊಂಡರು. ಸತತ ಆರು ವಾರಗಳ ಕಾಲ ಕಣ್ಣಿಗೆ ಸೂಕ್ಷ್ಮವಾದ ವ್ಯಾಯಾಮ ಮಾಡುವುದರ ಮೂಲಕ ಅವರಲ್ಲಿ ಇರುವ ಈ ಸಮಸ್ಯೆ ನಿವಾರಣೆ ಆಯಿತು ಎಂದು ವೈದ್ಯರು ಹೇಳುತ್ತಾರೆ.
ಇದನ್ನು ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ ಇದು ಕಣ್ಣಿಗೆ ಬಹಳ ಸಮಸ್ಯೆಯನ್ನು ಉಂಟುಮಾಡಬಹುದು. ಕಣ್ಣಿನ ಲೆನ್ಸ್ ಅಥವಾ ಮಸೂರ ಬೇಕಾದ ಹಾಗೆ ತನ್ನ ಆಕಾರವನ್ನು ಬದಲಾಯಿಸುತ್ತೆ. ನಾವು ಯಾವಾಗ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಬಹಳ ಹತ್ತಿರದಿಂದ ನೋಡುತ್ತೇವೆಯೋ ಆಗ ಮಸೂರ ಸಂಕುಚಿತಗೊಳ್ಳುತ್ತದೆ. ಕ್ರಮೇಣ ಇದು ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಕಣ್ಣಿನ ಬ್ಲಿಂಕಿಂಗ್ ಸಾಮರ್ಥ್ಯವು ಕಡಿಮೆಯಾಗುತ್ತದೆ ಜೊತೆಗೆ ವಿಷನ್ ಬ್ಲರ್ ಆಗಿ ಕಾಣಿಸಲು ಆರಂಭವಾಗುತ್ತದೆ.
30 ವರ್ಷದ ಮಹಿಳೆ ತನಗೆ ಸರಿಯಾಗಿ ಕಾಣಿಸುವುದಿಲ್ಲ ಏನನ್ನು ಓದಲು ಆಗುತ್ತಿಲ್ಲ ಒಮ್ಮೆಗೆ ಕಣ್ಣು ಕತ್ತಲೆ ಕಟ್ಟಿದಂತೆ ಆಗುತ್ತದೆ ಮತ್ತೆ ಸ್ವಲ್ಪ ಸಮಯದಲ್ಲಿ ಸರಿಯಾಗುತ್ತದೆ ಎಂದು ವೈದ್ಯರ ಬಳಿ ಕಣ್ಣಿನ ತಪಾಸಣೆಗಾಗಿ ಹೋಗುತ್ತಾಳೆ. ಆಕೆಯ ಕಣ್ಣಿನಲ್ಲಿ ಉಂಟಾಗುತ್ತಿರುವ ಸಮಸ್ಯೆಗೆ ಅಥವಾ ಸಿಂಡ್ರೋಮ್ ಗೆ ಮುಖ್ಯವಾದ ಕಾರಣ ಆಕೆ ರಾತ್ರಿ ಹೊತ್ತು ಕತ್ತಲಿನಲ್ಲಿ ಕನಿಷ್ಠ ಎರಡು ಗಂಟೆ ದಿನವು ಸ್ಮಾರ್ಟ್ ಫೋನ್ ಬಳಸುತ್ತಿದ್ದದ್ದು. ಆಕೆಯ ಮಗನ ಅಂಗವೈಕಲ್ಯತೆಯ ಕಾರಣದಿಂದಾಗಿ ಬ್ಯೂಟಿಷಿಯನ್ ಆಗಿದ್ದ ಆಕೆ ಕೆಲಸವನ್ನು ಬಿಟ್ಟು ಮನೆಯಲ್ಲಿ ಮಗನನ್ನು ನೋಡಿಕೊಳ್ಳುತ್ತಾರೆ.
ಆದರೆ ಮಗನ ಅಂಗವಿಕಲತೆಯ ಕಾರಣದಿಂದಾಗಿ ಆತನನ್ನ ನೋಡಿಕೊಳ್ಳಬೇಕಾಗುತ್ತದೆ ಇದೇ ಕಾರಣಕ್ಕೆ ರಾತ್ರಿ ಇಡಿ ಕತ್ತಲೆಯಲ್ಲಿ ಮೊಬೈಲ್ ಬಳಕೆ ಆರಂಭಿಸಿದ್ದಾರೆ. ಹಾಗೆಯೇ ಇದು ಮುಂದೆ ಅಭ್ಯಾಸವಾಗಿ ಆಕೆಗೆ ಕಣ್ಣಿನಲ್ಲಿ ಸಮಸ್ಯೆ ಉಂಟಾಗಿತ್ತು. ಆದರೆ ಆಕೆ ಆರಂಭದಲ್ಲಿ ತಪಾಸಣೆ ಮಾಡಿರುವುದರಿಂದ ಆಕೆಗೆ ಉಂಟಾಗುತ್ತಿರುವ ದೃಷ್ಟಿ ಸಮಸ್ಯೆಗೆ ಕಾರಣ ಏನು ಎಂಬುದನ್ನು ವೈದ್ಯರು ತಿಳಿಸುತ್ತಾರೆ. ಕೂಡಲೇ ಆಕೆ ಸ್ಮಾರ್ಟ್ ಫೋನ್ ಬಳಸುವುದನ್ನ ಕಮ್ಮಿ ಮಾಡಿದ್ದಾರೆ. ಈಗ ಆಕೆಯ ಕಣ್ಣಿನ ಸಮಸ್ಯೆ ನಿವಾರಣೆಯಾಗಿದೆ.
ಸ್ಮಾರ್ಟ್ ಫೋನ್ ಬಳಕೆ ಎಲ್ಲರಲ್ಲಿಯೂ ಹೆಚ್ಚಾಗಿದೆ. ಇಂದು ನಾವು ಮನೆಯವರಿಗೆ ಸಮಯ ಕೊಡುತ್ತೇವೊ ಇಲ್ಲವೋ ಗೊತ್ತಿಲ್ಲ. ಆದರೆ ಸ್ಮಾರ್ಟ್ ಫೋನ್ ಬಳಕೆಯನ್ನು ಮಾತ್ರ ಬಿಡುತ್ತಿಲ್ಲ ಇದರಿಂದ ಕೇವಲ ಕಣ್ಣಿನ ದೃಷ್ಟಿ ಸಮಸ್ಯೆ ಮಾತ್ರವಲ್ಲ. ಮೆದುಳಿಗೂ ಕೂಡ ಸಮಸ್ಯೆ ಉಂಟಾಗುತ್ತದೆ ನರಗಳು ದುರ್ಬಲವಾಗುತ್ತವೆ. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನು ಅರಿತುಕೊಂಡು ಸ್ಮಾರ್ಟ್ ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಗೆಜೆಟ್ ಬಳಕೆಯನ್ನು ತುಸು ಕಡಿಮೆ ಮಾಡಿದರೆ ಒಳ್ಳೆಯದು.