ಬದಿಯಡ್ಕ: ವೇದ ಮಾತಾ ಟ್ರಸ್ಟ್ (ರಿ) ಆಗಲ್ಪಾಡಿ ಇದರ ಆಶ್ರಯದಲ್ಲಿ ವಸಂತ ವೇದ ಶಿಬಿರ 2023 ಶನಿವಾರ ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಆರಂಭಿಸಲಾಯಿತು.
ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಶಂಕರ ನಾರಾಯಣ ಶರ್ಮ ಗೋಸಾಡ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಕೋರಿದರು. ಕ್ಷೇತ್ರದ ಆನುವಂಶಿಕ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ವೇದ ಗುರುಗಳಾದ ವೇದಮೂರ್ತಿ ವಿಘ್ನೇಶ್ ಭಟ್ ದೈತೋಟ, ವೇದಮೂರ್ತಿ ಬಾಲಸುಬ್ರಹ್ಮಣ್ಯ ಭಟ್ ಶಿರಂತಡ್ಕ, ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಕೂವೆಕಲ್ಲು ಮತ್ತು ವೇದಮೂರ್ತಿ ಮಾಧವ ಭಟ್ ಕೋಳಿಕಜೆ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಎಡೆಪ್ಪಾಡಿ ಸ್ವಾಗತಿಸಿ ನಿರೂಪಿಸಿದರು. ಕುಮಾರಿ ಅನನ್ಯ ಸುಧಾ ಚೆರ್ಕೂಡ್ಲು ವಂದಿಸಿದರು.
ಅಗಲ್ಪಾಡಿಯಲ್ಲಿ ವಸಂತ ವೇದ ಶಿಬಿರ ಆರಂಭ
0
ಏಪ್ರಿಲ್ 16, 2023