ನವದೆಹಲಿ:ವಂದೇ ಭಾರತ್ ಎಕ್ಸ್‌ಪ್ರೆಸ್ ಕೇರಳದ ಕಾಸರಗೋಡಿಗೆ ವಿಸ್ತರಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಘೋಷಿಸಿದ್ದಾರೆ.
ಈ ಸೇವೆಆರಂಭದಲ್ಲಿ ಕಣ್ಣೂರಿನಲ್ಲಿ ಕೊನೆಗೊಳಿಸಲು ನಿರ್ಧರಿಸಲಾಗಿತ್ತು. ಆ ಬಳಿಕ ಕೇಂದ್ರ ಸಚಿವ ವಿ ಮುರಳೀಧರನ್ ಅವರ ಮನವಿಯ ಮೇರೆಗೆ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇದಕ್ಕಾಗಿ ಎರಡು ಹಂತಗಳಲ್ಲಿ ಹಳಿಗಳ ನವೀಕರಣ ನಡೆಯಲಿದ್ದು, ಒಂದೂವರೆ ವರ್ಷದೊಳಗೆ ಮೊದಲ ಹಂತ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೊದಲ ಹಂತದ ನಂತರ, ರೈಲು ಗಂಟೆಗೆ 110 ಕಿಮೀ ವೇಗವನ್ನು ಕ್ರಮಿಸುತ್ತದೆ. ತಿರುವುಗಳನ್ನು ನೇರಗೊಳಿಸುವುದು ಮತ್ತು ಇತರ ಅಗತ್ಯ ಹೊಂದಾಣಿಕೆಗಳನ್ನು ಒಳಗೊಂಡಿರುವ ಎರಡನೇ ಹಂತವು ಪೂರ್ಣಗೊಳ್ಳಲು ಎರಡರಿಂದ ಮೂರೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದರ ನಂತರ, ರೈಲಿನ ವೇಗವನ್ನು ಗಂಟೆಗೆ 130 ಕಿಮೀಗೆ ಹೆಚ್ಚಿಸಲಾಗುತ್ತದೆ. ತಿರುವುಗಳಿರುವ ರೈಲು ಮಾರ್ಗಗಳವನ್ನು ನೇರಗೊಳಿಸಲು ಭೂಸ್ವಾಧೀನ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಸೋಮವಾರದ ಪ್ರಾಯೋಗಿಕ ಚಾಲನೆಯಲ್ಲಿ ಸರಾಸರಿ ವೇಗ ಗಂಟೆಗೆ 70 ಕಿ.ಮೀ.ಗಿಂತ ಕಡಿಮೆ ಇತ್ತು. ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ರೈಲು ಗಂಟೆಗೆ 110 ಕಿಮೀ ತಲುಪಿದೆ ಎಂದು ಲೋಕೋ ಪೈಲಟ್ ಹೇಳಿದ್ದಾರೆ. ಭಾರತದ ಅತ್ಯಂತ ವೇಗವಾಗಿ ಓಡುತ್ತಿರುವ ರೈಲು, ವಂದೇ ಭಾರತ್ ಎಕ್ಸ್‌ಪ್ರೆಸ್, ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಸರಾಸರಿ 83 ಕಿಮೀ ವೇಗದಲ್ಲಿ ಚಲಿಸುತ್ತಿದೆ.