ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದು ರಾಜ್ಯಕ್ಕೆ ಎರಡು ವಂದೇ ಭಾರತ್ ರೈಲು ಘೋಷಣೆ ಮಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ಕೇರಳಕ್ಕೆ ಏಪ್ರಿಲ್ 24ರಂದು ಭೇಟಿ ಮಾಡಲಿದ್ದಾರೆ.
ಇದೇ ವೇಳೆ ಕೊಚ್ಚಿಯಲ್ಲಿ ಯುವ ಸಮುದಾಯದ 'ಯುವಂ' ಸಮಾವೇಶ ಉದ್ಘಾನೆ ಮಾಡಿ ಮಾತನಾಡಲಿದ್ದಾರೆ ಎಂದು ಕೇರಳ ಬಿಜೆಪಿ ಮೂಲಗಳು ತಿಳಿಸಿವೆ.
ಎರಡು ವಂದೇ ಭಾರತ್ ರೈಲುಗಳ ಪೈಕಿ ಒಂದು ರೈಲು ತಿರುವನಂತಪುರದಿಂದ ಕಣ್ಣೂರು ನಡುವೆ ಸಂಚರಿಸಲಿದೆ. ಮತ್ತೊಂದು ರೈಲಿನ ಮಾಹಿತಿ ಲಭ್ಯವಾಗಿಲ್ಲ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
ಕಳೆದ ಸಲ ನರೇಂದ್ರ ಮೋದಿ ಭೇಟಿ ನೀಡಿದಾಗ 'ಪೋ ಮೋನೆ ಮೋದಿ' ಎಂಬ ಅಭಿಯಾನ ನಡೆದಿತ್ತು. ಈ ಬಾರಿ ಬಿಜೆಪಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಗಮನ ಸೆಳೆಯುವ ಸಲುವಾಗಿ 'ನನ್ನಿ ಮೋದಿ (Thank you Modi)' ಎಂಬ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಮುಖಂಡ ಸುರೇಂದ್ರನ್ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಇರುವುದರಿಂದ ಮೋದಿ ವೇಳಾಪಟ್ಟಿ ಬದಲಾವಣೆಯಾಗುವ ಸಾಧ್ಯತೆಗಳು ಇವೆ ಎಂದು ಕೇರಳ ಬಿಜೆಪಿಯ ಆಪ್ತ ಮೂಲಗಳು ತಿಳಿಸಿವೆ.