ಕಾಸರಗೋಡು: ವಿಶ್ವ ಆರೋಗ್ಯ ದಿನಾಚರಣೆ ಮತ್ತು ವಿಶ್ವ ಆಟಿಸಂ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ರಾಷ್ಟ್ರೀಯ ಆರೋಗ್ಯ ಮಿಷನ್ ಸಮ್ಮೇಳನ ಸಭಾಂಗಣದಲ್ಲಿ ನೆರವೇರಿಸಿದರು.
ಕಿರಿಯ ಆಡಳಿತ ವೈದ್ಯಾಧಿಕಾರಿ ಡಾ.ನಿರ್ಮಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರದ ಮಕ್ಕಳ ತಜ್ಞ ಡಾ.ಕೆ.ಟಿ.ಅಶ್ವಿನ್, ಜಿಲ್ಲಾ ಶುಶ್ರೂಷಕ ಅಧಿಕಾರಿ ಪಿ.ಎಂ.ಮೇರಿಕುಟ್ಟಿ, ಡಿಪಿಎಚ್‍ಎನ್ ಜೈನಮ್ಮ ಥಾಮಸ್ ಮಾತನಾಡಿದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠ ಸ್ವಾಗತಿಸಿ, ರಾಷ್ಟ್ರೀಯ ಆರೋಗ್ಯ ಮಿಷನ್ ಕಿರಿಯ ಸಲಹೆಗಾರ ಕಮಲ್ ಕೆ. ಜೋಸ್ ವಂದಿಸಿದರು.
ಬಳಿಕ ನಡೆದ ಜಾಗೃತಿ ವಿಚಾರ ಸಂಕಿರಣದಲ್ಲಿ ತೃಕರಿಪುರ ತಾಲೂಕು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಬಿಪಿನ್ ಕೆ. ನಾಯರ್ ತರಗತಿ ನಡೆಸಿದರು. ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳ ಆರ್‍ಬಿಎಸ್‍ಕೆ ಶುಶ್ರೂಷಕರು, ಆಶಾ ಕಾರ್ಯಕರ್ತೆಯರು ಹಾಗೂ ಆಟಿಸಂ ಮಕ್ಕಳ ಪೋಷಕರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಐಎಪಿ ಕಾಂಞಂಗಾಡ್ ಜಂಟಿಯಾಗಿ ಆಯೋಜಿಸಿದ್ದವು.
ಆಟಿಸಂ ಒಂದು ನರ ಬೆಳವಣಿಗೆಯ ಅಸ್ವಸ್ಥತೆಯಾಗಿದ್ದು ಅದು ಶೈಶವಾವಸ್ಥೆಯಲ್ಲಿ ಪ್ರಾರಂಭವಾಗುತ್ತದೆ. 'ಆಟಿಸಂ ಸ್ಪೆಕ್ಟ್ರಮ್' ಎಂಬ ಪದವನ್ನು ವ್ಯಾಪಕ ಶ್ರೇಣಿಯ ರೋಗಲಕ್ಷಣಗಳನ್ನು ವಿವರಿಸಲು ಬಳಸಲಾಗುತ್ತದೆ. ಪ್ರತಿ ವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಉದ್ದೇಶವು ಆಟಿಸಂ ಎಂಬ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದರ ವಿರುದ್ಧ ಹೋರಾಡುವ ವ್ಯಕ್ತಿಗಳೊಂದಿಗೆ ಒಗ್ಗಟ್ಟನ್ನು ತೋರಿಸುವುದು. ವಲ್ರ್ಡ್ ಆಟಿಸಂ ಜಾಗೃತಿ ದಿನದ 2023 ರ ವಿಷಯವು 'ನಿರೂಪಣೆಯನ್ನು ಪರಿವರ್ತಿಸುವುದು: ಮನೆಯಲ್ಲಿ, ಕೆಲಸದಲ್ಲಿ ಕಲೆ ಮತ್ತು ನೀತಿಗೆ ಕೊಡುಗೆಗಳು'.
ವಿಶ್ವ ಆರೋಗ್ಯ ಸಂಸ್ಥೆಯು ಏಪ್ರಿಲ್ 7, 1948 ರಂದು ಅಸ್ತಿತ್ವಕ್ಕೆ ಬಂದಿತು. ವಿಶ್ವ ಆರೋಗ್ಯ ದಿನವನ್ನು 1950 ರಿಂದ ಆಚರಿಸಲಾಗುತ್ತದೆ. ಆರೋಗ್ಯವನ್ನು ಉತ್ತೇಜಿಸಲು, ಜಗತ್ತನ್ನು ಸುರಕ್ಷಿತವಾಗಿರಿಸಲು ಮತ್ತು ದುರ್ಬಲರಿಗೆ ಸೇವೆ ಸಲ್ಲಿಸಲು ಒಟ್ಟಾಗಿ ಕೆಲಸ ಮಾಡಲು ಘಟಕವನ್ನು ವಿಶ್ವದ ರಾಷ್ಟ್ರಗಳು ಸ್ಥಾಪಿಸಿವೆ. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸಾಧಿಸುವುದು ಗುರಿಯಾಗಿದೆ. ಈ ವರ್ಷದ ಆರೋಗ್ಯ ದಿನದ ಸಂದೇಶ 'ಎಲ್ಲರಿಗೂ ಆರೋಗ್ಯ'. ಈ ಸಂದೇಶವನ್ನು ಆಧರಿಸಿ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಮಾಹಿತಿ ನೀಡಿದರು.
ವಿಶ್ವ ಆರೋಗ್ಯ ದಿನಾಚರಣೆ: ವಿಶ್ವ ಆಟಿಸಂ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ
0
ಏಪ್ರಿಲ್ 14, 2023