ಕಾಸರಗೋಡು: ನಗರದ ಪಿಲಿಕುಂಜೆ ಪುಲಿಕುನ್ ಶ್ರೀ ಜಗದಂಬಾ ದೇವಸ್ಥಾನದ ವತಿಯಿಂದ ದೇವಸ್ಥಾನಕ್ಕೆ ಸಹಕರಿಸುವ ಭಕ್ತಾದಿಗಳ ಸಹಭಾಗಿತ್ವದಲ್ಲಿ ಕುಟುಂಬ ಸಮ್ಮಿಲನ ಹಾಗೂ ಅದೃಷ್ಟ ಚೀಟಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಎಡನೀರು ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಅದೃಷ್ಟ ಚೀಟಿ ಬಿಡುಗಡೆಗೊಳಿಸಿ, ಆಶೀರ್ವಚನ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಪಿ ಪೊದುವಾಳ್ ಅಧ್ಯಕ್ಷತೆ ವಹಿಸಿದ್ದರು. ಉಚ್ಚಿಲ ಪದ್ಮನಾಭ ತಂತ್ರಿ ಅನುಗ್ರಹ ಭಾಷಣ ಮಾಡಿದರು. ಕಾಞಂಗಾಡು ಸಹಕಾರಿ ತರಬೇತಿ ಕಾಲೇಜಿನ ನಿರ್ದೇಶಕರಾದ ಪಿ.ವಿ.ರಾಗೇಶ್, ಬಾಲಚಂದ್ರನ್ ಕೋಟೋಡಿ, ಉದ್ಯಮಿ ಬಿ.ವಸಂತ ಪೈ ಬದಿಯಡ್ಕ, ಡಾ, ಅನಂತ ಕಾಮತ್, ವಕೀಲ ಯು.ಎಸ್ ಬಾಲನ್, ಡಾ.ಭರತನ್, ಕೆ.ಎಸ್.ಮಲ್ಯ, ನಾರಾಯಣ ನಾಯ್ಕ್, ವಾರ್ಡ್ ಕೌನ್ಸಿಲರ್ ವಿಮಲಾ ಶ್ರೀಧರ, ದೇವಸ್ಥಾನದ ಕಾರ್ಯದರ್ಶಿ ಸುಜಿತ್ ಅಮೈ ಉಪಸ್ಥಿತರಿದ್ದರು. ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಕೆ.ಎನ್.ವೇಣುಗೋಪಾಲ್ ಸ್ವಾಗತಿಸಿದರು.
ಪಿಲಿಕುಂಜೆ ಶ್ರೀ ಜಗದಂಬಾ ದೇವಸ್ಥಾನದಲ್ಲಿ ಕುಟುಂಬ ಸಮ್ಮಿಲನ, ಅದೃಷ್ಟಚೀಟಿ ಬಿಡುಗಡೆ
0
ಏಪ್ರಿಲ್ 03, 2023
Tags