ನವದೆಹಲಿ: ಭಾರತವು ತನ್ನ ರಾಜಕೀಯ ಸಂವಹನ ಮತ್ತು ಇಂಧನ ಸಂಪನ್ಮೂಲಗಳ ವಿಚಾರದಲ್ಲಿ ವಾಸ್ತವಿಕ ದೃಷ್ಟಿಕೋನ ಹೊಂದಿರಬೇಕು ಎಂದು ಭಾರತಕ್ಕೆ ಭೇಟಿ ನೀಡಿರುವ ಉಕ್ರೇನ್ ವಿದೇಶಾಂಗ ಇಲಾಖೆಯ ಉಪ ಸಚಿವೆ ಎಮಿನ್ ಝಪರೋವಾ ಸೋಮವಾರ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಮಾಡುತ್ತಿರುವ ಯುದ್ಧದ ವಿರುದ್ಧ ಮತ ಚಲಾಯಿಸಲು ಭಾರತ ಹಿಂದೆ ಸರಿದು ತಟಸ್ಥ ಧೋರಣೆ ತೆಗೆದುಕೊಂಡಿರುವುದರ ಹಿನ್ನೆಲೆ ಅವರು ಈ ಹೇಳಿಕೆಯನ್ನು ನೀಡಿದರು.
ನಾಲ್ಕು ದಿನಗಳ ಭಾರತ ಭೇಟಿಗಾಗಿ ಭಾನುವಾರ ಆಗಮಿಸಿದ ಝಪರೋವಾ ಅವರು ಸೋಮವಾರ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸಂಜಯ್ ವರ್ಮಾ ಅವರನ್ನು ಭೇಟಿಯಾದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಝಪರೋವಾ ಅವರು, 'ಭಾರತವು ತನ್ನ ಇಂಧನ ಸಂಪನ್ಮೂಲಗಳು, ಮಿಲಿಟರಿ ಒಪ್ಪಂದಗಳು ಮತ್ತು ರಾಜಕೀಯ ಮಾತುಕತೆಗಳಲ್ಲಿ ವಾಸ್ತವಿಕ ನಡೆಯನ್ನು ಹೊಂದಿರಬೇಕು.
ಪ್ರಧಾನಿ ನರೇಂದ್ರ ಮೋದಿಯವರ ಪ್ರಜಾಪ್ರಭುತ್ವದ ನೀತಿ, ಹೇಳಿಕೆಗಳು ಹಾಗೂ 'ಯುದ್ಧದ ಯುಗವಿಲ್ಲ' ಎಂಬ ಯೋಚನೆಯ ತಂತ್ರಗಾರಿಕೆ ಅಳವಡಿಸಲು ಅವಶ್ಯವಾಗಿದೆ' ಎಂದು ತಿಳಿಸಿದರು.