ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ 'ಚಿಂತನ-ಮಂಥನ'ಕಾರ್ಯಕ್ರಮ ಏ. 25ರಂದು ಮಧ್ಯಾಹ್ನ 3.30ಕ್ಕೆ ನಗರದ ಬ್ಯಮಕ್ ರಸ್ತೆಯ ಕಸಾಪ ಕಚೇರಿಯಲ್ಲಿ ಜರುಗಲಿದೆ. ಬಹುಭಾಷಾ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಡಾ. ಪಿ.ಶ್ರೀಕೃಷ್ಣ ಭಟ್ ಉದ್ಘಾಟಿಸುವರು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭ ನಿವೃತ್ತ ಬ್ಯಾಂಕ್ ಪ್ರಬಂಧಕ ಮುರಳೀಧರ ಕಾಸರಗೋಡು ಅವರ ಚೊಚ್ಚಲ ಕೃತಿ'ಸ್ವಯಂಗತಂ'(ನೆನಪಿನ ಬುತ್ತಿ) ಕೃತಿಯನ್ನು ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಬಿಡುಗಡೆಗೊಳಿಸುವರು. ಖ್ಯಾತ ಸಾಹಿತಿ, ನಿವೃತ್ತ ಪ್ರಾಧ್ಯಾಪಿಕೆ ಪ್ರೊ. ಪ್ರಮಿಳಾ ಮಾಧವ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಖ್ಯಾತ ಜ್ಯೋತಿಷಿ ಸುಕುಮಾರ ಆಲಂಪಾಡಿ ಅತಿಥಿಯಾಗಿ ಭಾಗವಹಿಸುವರು. ಸಂಗೀತ ವಿದುಷಿ ರಾಧಾಮುರಳೀಧರ್ ಮತ್ತು ಬಳಗದವರಿಂದ ಭಾವಗಾಯನ ಕಾರ್ಯಕ್ರಮ ಜರುಗಲಿದೆ. ಕೃತಿಕಾರ ಮುರಳೀಧರ ಕಾಸರಗೋಡು ಅನಿಸಿಕೆ ವ್ಯಕ್ತಪಡಿಸುವರು.
ಕಸಾಪದಿಂದ ಚಿಂತನ ಮಂಥನ, ಕೃತಿ ಬಿಡುಗಡೆ ಸಮಾರಂಭ
0
ಏಪ್ರಿಲ್ 20, 2023