ಕೊಚ್ಚಿ: ಪ್ರಧಾನಿಗೆ ಬೆದರಿಕೆ ಪತ್ರ ಬರೆದ ಪ್ರಕರಣದಲ್ಲಿ ಎರ್ನಾಕುಳಂನ ಕತ್ರಿಕಡವ್ ನಿವಾಸಿ ಕ್ಸೇವಿಯರ್ ಎಂಬಾತನನ್ನು ಬಂಧಿಸಲಾಗಿದೆ.
ಈ ಪತ್ರದ ಹಿಂದೆ ಇಬ್ಬರ ನಡುವಿನ ವೈಯಕ್ತಿಕ ದ್ವೇಷವಿದೆ ಎಂದು ಕೊಚ್ಚಿ ಕಮಿಷನರ್ ಕೆ.ಸೇತುರಾಮನ್ ಹೇಳಿದ್ದಾರೆ. ಅವರ ಕೈಬರಹದ ವೈಜ್ಞಾನಿಕ ಪರೀಕ್ಷೆಯ ನಂತರ ಅವರನ್ನು ಬಂಧಿಸಲಾಯಿತು.
ಸೋಮವಾರ ಕೇರಳಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಒಂದು ವಾರದ ಹಿಂದೆ ಬಿಜೆಪಿ ರಾಜ್ಯ ಕಚೇರಿಗೆ ಬೆದರಿಕೆ ಪತ್ರ ಬಂದಿತ್ತು. ನಿನ್ನೆ ಪತ್ರದ ಹಿಂದೆ ಕ್ಸೇವಿಯರ್ ಇದ್ದಾರೆ ಎಂದು ಸಂಶಯಿಸಲಾಗಿತ್ತು. ಕ್ಸೇವಿಯರ್ ತನ್ನ ದ್ವೇಷವನ್ನು ಹೋಗಲಾಡಿಸಲು ಈ ರೀತಿ ಮಾಡಿರಬಹುದು ಎಂದು ಜಾನಿ ಎಂಬವರು ಪೋಲೀಸರಿಗೆ ಹೇಳಿದ್ದ. ಈ ತನಿಖೆಯ ಆಧಾರದ ಮೇಲೆ ಕ್ಸೇವಿಯರ್ ಆರೋಪಿ ಎಂದು ತಿಳಿದುಬಂದಿದೆ.
ಜಾನಿ ಆರೋಪದ ಆಧಾರದ ಮೇಲೆ ಪೆÇಲೀಸರು ಈ ಹಿಂದೆ ಕ್ಸೇವಿಯರ್‍ನನ್ನು ವಿಚಾರಣೆ ನಡೆಸಿದ್ದರು. ಅವರು ಆರೋಪವನ್ನು ನಿರಾಕರಿಸಿದ ನಂತರ, ಕೈಬರಹವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯಲ್ಲಿ ಕ್ಸೇವಿಯರ್ ಬರೆದಿರುವುದು ನಿಚ್ಚಳಗೊಂಡಿತು. ಪ್ರಧಾನಿ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶ ರವಾನಿಸಲಾಗಿತ್ತು.