ತಿರುವನಂತಪುರಂ: ಕೇರಳದಲ್ಲೂ ವಂದೇ ಭಾರತ್ ಎಕ್ಸ್‍ಪ್ರೆಸ್ ಸಂಚಾರಕ್ಕೆ ರೈಲ್ವೆ ಸಚಿವಾಲಯ ಮುಂದಾಗಿದೆ.
ವಂದೇ ಭಾರತ್ ಮಾರ್ಗದಲ್ಲಿ ಕೇರಳವನ್ನು ಸೇರಿಸುವ ಕ್ರಮವಿದ್ದರೂ, ರೈಲ್ವೇ ಮೂರು ಪ್ರಸ್ತಾವನೆಗಳನ್ನು ಪರಿಗಣಿಸುತ್ತಿದೆ.
ಪ್ರಸ್ತುತ, ಕೊಯಮತ್ತೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ವಂದೇ ಭಾರತ್ ಅನ್ನು ಕೊಚ್ಚಿಯವರೆಗೆ ವಿಸ್ತರಿಸಲಾಗುತ್ತಿದೆ. ಇನ್ನೊಂದು ವಂದೇ ಭಾರತವನ್ನು ಕೊಯಮತ್ತೂರಿನಿಂದ ಚೆನ್ನೈ ಮೂಲಕ ಮಂಗಳೂರಿನವರೆಗೆ ವಿಸ್ತರಿಸಲಾಗುವುದು. ಕೊಚ್ಚುವೇಲಿಯಿಂದ ಮಂಗಳೂರಿಗೆ ಕಡಿಮೆ ವೇಗದ ಸೇವೆ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಕೇರಳದಲ್ಲಿ ಟ್ರ್ಯಾಕ್ ಮತ್ತು ಸಿಗ್ನಲ್ ವ್ಯವಸ್ಥೆಗಳೊಂದಿಗೆ, ಸೇವೆಯು ಸರಾಸರಿ 65 ಕಿಮೀ ವೇಗದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಶೀಘ್ರದಲ್ಲಿಯೇ ಈ ಸೇವೆ ಆರಂಭವಾದರೆ ಕೊಯಮತ್ತೂರಿನಿಂದ ಕೇರಳಕ್ಕೆ ಸೇವೆ ವಿಸ್ತರಿಸುವ ಸಾಧ್ಯತೆ ಇದೆ.
ತಿರುವನಂತಪುರದಿಂದ ಕಣ್ಣೂರಿಗೆ ಆರು ಗಂಟೆಗಳಲ್ಲಿ; ಈ ಮಾರ್ಗಗಳ ಮೂಲಕ ಕೇರಳದ ವಂದೇ ಭಾರತ್ ಸೇವೆ ಸಾಕಾರಗೊಳ್ಳಲಿದೆ.
ಕೇರಳಕ್ಕೆ ವಂದೇ ಭಾರತ್ ಎಕ್ಸ್‍ಪ್ರೆಸ್ ಮುಂದಿನ ತಿಂಗಳಿನಿಂದ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಚೆನ್ನೈ-ಕೊಯಮತ್ತೂರು ಮಾರ್ಗದಂತೆ ಕೇರಳ ಎಂಟು ಬೋಗಿಗಳ ವಂದೇ ಭಾರತ್ ರೈಲನ್ನು ಪಡೆಯಲಿದೆ ಎಂದು ವರದಿಯಾಗಿದೆ. ಮಾರ್ಪಡಿಸಿದ ವಂದೇ ಭಾರತ್ ರೈಲು 392 ಟನ್ ತೂಕ ಹೊಂದಿದೆ. ಕೇವಲ 52 ಸೆಕೆಂಡುಗಳಲ್ಲಿ 100 ಕಿ.ಮೀ ಓಡಬಲ್ಲ ಸೆಮಿ ಹೈಸ್ಪೀಡ್ ಸೆಲ್ಫ್ ಪೆÇ್ರಪೆಲ್ಲರ್ ರೈಲು ತಿರುವನಂತಪುರದಿಂದ ಆರು ಗಂಟೆಗಳಲ್ಲಿ ಕಣ್ಣೂರು ತಲುಪಲಿದೆ.
ಕೇರಳಕ್ಕೆ ವಂದೇ ಭಾರತ್ ಎಕ್ಸ್‍ಪ್ರೆಸ್; ಸೂಚನೆ ನೀಡಿದ ರೈಲ್ವೆ
0
ಏಪ್ರಿಲ್ 07, 2023