ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ ನಿನ್ನೆ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ಯುಎಲ್ ಎಲ್ ಸಿಸಿಎಸ್ ಕಂಪನಿಯ ಕಾರ್ಮಿಕರಿಗೆ ಯೂನಿಟ್ ವ್ಯಾಪ್ತಿಯ ಕಾಸರಗೋಡು ಕರಂದಕ್ಕಾಡು ಫ್ಲೈಓವರ್ ನಿರ್ಮಾಣ ಸ್ಥಳದಲ್ಲಿ ಬಿಸಿಲಿನ ಬೇಗೆಗೆ ದಾಹ ನೀಗಿಸಲು "ಮಜ್ಜಗೆ ವಿರತಣೆ" ಮಾಡಲಾಯಿತು.
ನಗರಸಭೆಯ 5 ನೇ ವಾರ್ಡ್ ಕೌನ್ಸಿಲರ್ ಹೇಮಲತಾ ಕಾರ್ಮಿಕರಿಗೆ ಮಜ್ಜಿಗೆ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು. ಯೂನಿಟ್ ಅಧ್ಯಕ್ಷ ರತೀಶ್ ರಾಮು ವಿಡಿಯೋ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ವಾಸು. ಎ ಮತ್ತು ಕಾರ್ಯದರ್ಶಿ ಚಂದ್ರಶೇಖರ, ವಲಯ ಸಾಂತ್ವನ ಯೋಜನೆಯ ಕೋರ್ಡಿನೇಟರ್ ಮೈಂದಪ್ಪ, ಯೂನಿಟ್ ಉಪಾಧ್ಯಕ್ಷ ಗಣೇಶ್ ರೈ, ಯೂನಿಟ್ ಕೋಶಾಧಿಕಾರಿ ಅಮಿತ್, ನಿರೀಕ್ಷಕ ನಿಯಾಸ್ ಹಾಗೂ ಯು.ಎಲ್.ಎಲ್.ಸಿಸಿಎಸ್ ಕಂಪನಿಯ ಇಂಜಿನಿಯರ್ ಗಳು ಇತರ ಉದ್ಯೋಗಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ ಜೊತೆ ಕಾರ್ಯದರ್ಶಿ ವಿಶಾಖ್ ವಂದಿಸಿದರು.
ಎಕೆಪಿಎಯಿಂದ ಮಜ್ಜಿಗೆ ವಿತರಣೆ
0
ಏಪ್ರಿಲ್ 20, 2023