ಮಂಜೇಶ್ವರ: ತಿರುವನಂತಪುರ-ಕಣ್ಣೂರು ವಂದೇ ಭಾರತ್ ರೈಲು ಸಂಚಾರವನ್ನು ಕಾಸರಗೋಡು ಜಿಲ್ಲೆಯಾಗಿ ಮಂಗಳೂರು ತನಕ ವಿಸ್ತರಣೆ ಮಾಡುವಂತೆ ಬಿಜೆಪಿ ಮಂಜೇಶ್ವರ ಮಂಡಲ ಘಟಕ ಪ್ರಧಾನಿಯವರಲ್ಲಿ ವಿನಂತಿಸಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ತಿಳಿಸಿದರು.
ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಜನತೆಯಲ್ಲಿ ಆತ್ಮವಿಶ್ವಾಸ ತುಂಬುತ್ತಿದೆ. ಪಿಂಚಣಿ ಹಣದ ಕೇಂದ್ರದ ಪಾಲು ಇನ್ನು ಮುಂದೆ ನೇರವಾಗಿ ಕೇಂದ್ರ ಸರ್ಕಾರ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದು ಎಂದು ಬಿಜೆಪಿ ತಿಳಿಸಿದೆ. ಕೃಷಿ ಸನ್ಮಾನ್ ಯೋಜನೆ ಫಲಾನುಭವಿಗಲು ತಮ್ಮ ವಿವರ ಡಿಜಿಟಲ್ ಎಂಟ್ರಿಗಳನ್ನು ಶೀಘ್ರವೇ ಕೃಷಿ ಭವನ ಗಳಲ್ಲಿ ಲಗತ್ತಿಸಿ ಎಂದು ಮಾಹಿತಿ ನೀಡಿದೆ. ಉದ್ಯಮಕ್ಕೆ ಬೇಕಾಗಿ ಸಾಲ ಪಡೆದವರನ್ನು ಬ್ಯಾಂಕ್ ಗಳು ರಿಕವರಿ ಏಜೆಂಟ್ ಗಳ ಮೂಲಕ ಬೆದರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ತಿಳಿಸಿದೆ.
ಈ ಬಗ್ಗೆ ನಡೆದ ಬಿಜೆಪಿ ಮಂಡಲ ಕೋರ್ ಸಭೆಯಲ್ಲಿ ಮುಖಂಡರಾದ ಆದರ್ಶ್ ಬಿಎಂ, ಮಣಿಕಂಠ ರೈ, ಅಶ್ವಿನಿ ಪಜ್ವ, ಎಕೆ ಕೈಯ್ಯಾರು ಉಪಸ್ಥಿತರಿದ್ದರು.
ವಂದೇ ಭಾರತ್ ರೈಲು: ಮಂಗಳೂರು ತನಕ ವಿಸ್ತರಣೆಗೆ ಪ್ರಧಾನಿಗೆ ಬಿಜೆಪಿ ಮಂಜೇಶ್ವರ ಘಟಕ ಆಗ್ರಹ
0
ಏಪ್ರಿಲ್ 16, 2023
Tags