ಆಲಪ್ಪುಳ: ಹರಿಪಾಡ್ ಬ್ಯಾಂಕ್ ಅಧಿಕಾರಿಯನ್ನು ವಶಕ್ಕೆ ಪಡೆದು ಥಳಿಸಿದ ಪ್ರಕರಣದಲ್ಲಿ ಡಿವೈಎಸ್ಪಿ ಸೇರಿದಂತೆ ಏಳು ಪೋಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ಕುರಿತು ಪ್ರಕರಣ ದಾಖಲಿಸುವಂತೆ ಮಾನವ ಹಕ್ಕುಗಳ ಆಯೋಗ ಸೂಚಿಸಿತ್ತು. ಬ್ಯಾಂಕ್ ಅಧಿಕಾರಿ ಅರುಣ್ ಎಂಬಾತನಿಗೆ ಅಮಾನುಷವಾಗಿ ಥಳಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.
ಹರಿಪಾಡ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಶ್ನಾರ್ಹ ಘಟನೆಯು 2017 ರ ಯುಡಿಎಫ್ ಹರ್ತಾಳ್ ನಂದು ನಡೆದಿತ್ತು. ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಅರುಣ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅಮಾನುಷವಾಗಿ ಹೊಡೆದ ನಂತರ ಅರುಣ್ ಆಸ್ಪತ್ರೆಯಲ್ಲಿ ಒಂದು ತಿಂಗಳು ಚಿಕಿತ್ಸೆಪಡೆಯಬೇಕಾಯಿತು.
ಎಫ್‍ಐಆರ್‍ನಲ್ಲಿ ಡಿವೈಎಸ್‍ಪಿ ಮನೋಜ್ ಕೈಯಿಂದ ಹೊಡೆದು ವೃಷಣ ಹಿಂಡಿದ್ದಾರೆ ಎಂದು ಹೇಳಲಾಗಿದೆ. ಎಸ್‍ಐ ಮತ್ತು ಇತರ ಪೆÇಲೀಸರು ಕೆಳಗೆ ಬಾಗಿ ಅವನ ಬೆನ್ನುಮೂಲೆಗಳಿಗೆ ಥಳಿಸಲಾಗಿದೆ ಎಂದು ದೂರಲಾಗಿತ್ತು.
ಹರಿಪಾಡ್ ಕಸ್ಟಡಿಗೆ ಥಳಿತ: ಡಿವೈಎಸ್ಪಿ ಸೇರಿದಂತೆ ಏಳು ಪೋಲೀಸರ ವಿರುದ್ಧ ಪ್ರಕರಣ, ಮಾನವ ಹಕ್ಕು ಆಯೋಗದ ನಿರ್ದೇಶನದ ಮೇರೆಗೆ ಕ್ರಮ
0
ಏಪ್ರಿಲ್ 16, 2023