HEALTH TIPS

ಮಗನಂತೆ ಸಾಕಿದ ಆಲದ ಮರಕ್ಕೆ ಮದುವೆ ಮಾಡಿದ ಅಜ್ಜಿ! ಅಂದಹಾಗೆ ವೃಕ್ಷದ ಹೆಂಡತಿ ಯಾರು ಗೊತ್ತಾ?

                 ಪುರ್ಬಾ:ನಾವು ಮರಗಳನ್ನು ರಕ್ಷಿಸಿದರೆ, ಅವು ನಮ್ಮನ್ನು ರಕ್ಷಿಸುತ್ತವೆ. ಮರಗಳಿಲ್ಲದೆ ಜನ ಬದುಕಲಾರರು. ಅದಕ್ಕಾಗಿ ಮರಗಳನ್ನು ಬೆಳೆಸಬೇಕು. ಇರುವುದನ್ನು ಸಂರಕ್ಷಿಸಿ. ಹೊಸ ಗಿಡಗಳನ್ನು ನೆಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಆದರೆ ಕೆಲವರು ಮಾತ್ರ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸುತ್ತಿದ್ದಾರೆ.

                 ಪಶ್ಚಿಮ ಬಂಗಾಳದ ಪುರ್ಬಾ ಬರ್ದಮಾನ್ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಮನೆಯ ಬಳಿ ನೆಟ್ಟಿದ್ದ ಆಲದ ಮರವನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಬಾಲ್ಯದಿಂದಲೂ ಅದನ್ನು ಬೆಳೆಸಿದ್ದಾರೆ. ಈಗ ಅದು ದೊಡ್ಡ ಮರವಾಗಿದ್ದು, ಕೊಂಬೆಗಳು ಹರಡಿಕೊಂಡಿವೆ.

                 ಪುರ್ಬಾ ಬರ್ದಮಾನ್ ಜಿಲ್ಲೆಯ ಸ್ಮರಣ ಮಂಡಲದ ಪಾರಿಜಾತನಗರದವರಾದ ರೇಖಾದೇವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಇಬ್ಬರಿಗೂ ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಆಕೆಯ ಪತಿ ಕೆಲವು ತಿಂಗಳ ಹಿಂದೆ ನಿಧನರಾದರು. ಆಲದ ಮರವನ್ನೇ ಮಗನೆಂದು ಭಾವಿಸುವ ರೇಖಾದೇವಿ, ಇದೀಗ ಆ ಮರಕ್ಕೆ ಮದುವೆ ಮಾಡಿಸಿದ್ದಾರೆ. ಸಂಬಂಧಿಕರನ್ನು ಕರೆಸಿ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ.

               ಆಲದ ಮರವನ್ನು ತನ್ನ ಮಗುವಿನಂತೆ ಬೆಳೆಸಿದ್ದೇನೆ. ನಾನು ಮತ್ತು ನನ್ನ ಗಂಡ ಈ ಮರ ದೊಡ್ಡದಾದ ನಂತರ ಮದುವೆ ಮಾಡೋಣ ಅಂದುಕೊಂಡಿದ್ದೆವು. ಆದರೆ ಅವರು ಅಷ್ಟರಲ್ಲಿ ನಿಧನರಾದರು. ಇಷ್ಟು ವರ್ಷಕ್ಕೆ ಅವರ ಆಸೆ ಈಡೇರಿದೆ ಎಂದರು

                 ಈ ಆಲದ ಮರಕ್ಕೆ ರೇಖಾದೇವಿ ಯಾರ ಜೊತೆ ಮದುವೆ ಮಾಡಿಸಿದ್ದಾರೆಂದರೆ ಆಶ್ಚರ್ಯ ಪಡುತ್ತೀರಿ. ಆ ಆಲದ ಮರದ ಪಕ್ಕದಲ್ಲಿ ಒಂದು ಅರಳಿ ಮರವಿದ್ದು, ಅದೇ ವಧು ಆಗಿದೆ. ರೇಖಾದೇವಿ ಅರಳಿ ಮರ ಮತ್ತು ಆಲದ ಮರಕ್ಕೆ ಮದುವೆ ಮಾಡಿಸಿ ತನ್ನ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಅವರೆಡು ಕೇವಲ ಮರಗಳಲ್ಲ. ನನ್ನ ಮಗ ಮತ್ತು ಸೊಸೆ, ಅವುಗಳನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡುತ್ತೇನೆ ಎನ್ನುತ್ತಾರೆ ರೇಖಾದೇವಿ.


               ಸ್ಥಳೀಯರಿಂದ ಒಂದಷ್ಟು ಹಣ ಸಂಗ್ರಹಿಸಿ ಆಲದ ಮರಕ್ಕೆ ಮದುವೆ ಮಾಡಿಸಿದ್ದಾರೆ. ಸೀರೆ-ಧೋತಿ ಕಟ್ಟಿ, ವೇದ ಮಂತ್ರಗಳ ನಡುವೆ ತಮ್ಮ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಮಾಡಿದ್ದಾರೆ. ಈ ವಿಚಿತ್ರ ಮದುವೆಯನ್ನು ವೀಕ್ಷಿಸಲು ಅನೇಕ ಸ್ಥಳೀಯರು ನೆರೆದಿದ್ದರು. ಆಲದ ಮರ ಮತ್ತು ಅರಳಿ ಮರಗಳ ಮದುವೆಯನ್ನು ನೋಡಿ ದಂಪತಿಗೆ ಆಶೀರ್ವಾದ ಮಾಡಿದರು.

                 ಆಲದ ಮರ ಮತ್ತು ಅರಳಿ ಮರಗಳಿಗೆ ಮದುವೆ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ನಿಜಕ್ಕೂ ಜನರ ಮದುವೆಯಂತೆಯೇ ಅದ್ಧೂರಿಯಾಗಿ ಮಾಡಲಾಗಿದೆ. ರೇಖಾ ದೇವಿಯ ಮರಗಳ ಮೇಲಿನ ಪ್ರೀತಿ ನೋಡಿ ನೆಟ್ಟಿಗರು ಆಶ್ಚರ್ಯವ್ಯಕ್ತಪಡಿಸಿದ್ದಾರೆ. ನಿಮ್ಮಂತಹವರಿದ್ದರೆ ಈ ಭೂಮಿ ಸದಾ ಹಸಿರಿನಿಂದ ಕೂಡಿರುತ್ತದೆ, ವರ್ಣಮಯವಾಗಿರುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries