ಕಾಸರಗೋಡು: ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಸಂಪನ್ನಗೊಂಡಿತು. ಶ್ರೀ ಕಿನ್ನಿಮಾಣಿ, ಶ್ರೀ ಪೂಮಾಣಿ, ಶ್ರೀ ಬೀರ್ನಾಳ್ವ, ಶ್ರೀ ಧೂಮಾವತೀ ಹಾಗೂ ಪರಿವಾರ ದೈವಗಳ ನೇಮೋತ್ಸವ, ಪಾಪೆ ಬಂಡಿ ಉತ್ಸವ, ವಿಶೇಷ ಸುಡುಮದ್ದಿನ ಪ್ರದರ್ಶನ ನಡೆಯಿತು.
ಶ್ರೀ ದೈವಸ್ಥಾನದ ಆರಾಟ್ ಸ್ನಾನ ಕೆರೆಯಾದ ವಿದ್ಯುದ್ದೀಪಗಳಿಂದ ಅಲಂಕೃತ ಉಜಿರೆ ಕೆರೆಯಲ್ಲಿ ಸುಡುಮದ್ದು ಪ್ರದರ್ಶನದೊಂದಿಗೆ ನಡೆದ ಆರಾಟ್ ಉತ್ಸವ - ಅವಭೃತ ಸ್ನಾನದ ನಂತರ ಧ್ವಜಾವರೋಹಣದೊಂದಿಗೆ ಬೆದ್ರಡ್ಕ ಜಾತ್ರೆ ಸಂಪನ್ನಗೊಂಡಿತು.
ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಜಾತ್ರೆ ಸಂಪನ್ನ
0
ಏಪ್ರಿಲ್ 06, 2023