ಕುಂಬಳೆ: ಪೆರ್ಮುದೆ ಸಮೀಪದ ಸಿದ್ಧಿಕುಡಾಲು ಅಮ್ನೂರು ಸಹಪರಿವಾರ ದೈವಗಳ ಧರ್ಮಚಾವಡಿಯ ಗೃಹ ಪ್ರವೇಶ, ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಗೃಹಪ್ರವೇಶ ಹಾಗೂ ದೈವಗಳ ಪ್ರತಿಷ್ಠೆ ಕಾರ್ಯ ನಡೆಯಿತು. ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಗೃಹ ಪ್ರವೇಶ, ದೈವ ದೇವರ ಪ್ರತಿಷ್ಠೆ ಜರಗಿತು ಬಳಿಕ ಮುಡಿಪು ಶುದ್ಧಿ,ಮಹಾಪೂಜೆ ನೆರವೇರಿತು.