ಕಾಸರಗೋಡು: ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣ ಇಲಾಖೆ, ಕಾಸರಗೋಡು ಇವರ ಮೇಲ್ವಿಚಾರಣೆಯಲ್ಲಿ ಸ್ಥಾಪಿಸಲ್ಪಟ್ಟಿರುವ ಕಾಸರಗೋಡು, ಕಾರಡ್ಕ ಬ್ಲಾಕ್ ಮಟ್ಟದ ಕೃಷಿಶ್ರೀ ಕೇಂದ್ರದ ಸದಸ್ಯರಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮವು ಕಾಸರಗೋಡಿನ ಎಟಿಎಂಎ ಸಭಾಂಗಣದಲ್ಲಿ ಆರಂಭಗೊಂಡಿತು.
ಸದಸ್ಯರಿಗೆ ಕೃಷಿ ಯಂತ್ರೋಪಕರಣಗಳನ್ನು ಬಳಸಲು ಅನುವು ಮಾಡಿಕೊಡಲು ಯಂತ್ರೋಪಕರಣಗಳುಬಳಕೆಯ ತರಬೇತಿಯೊಂದಿಗೆ ನಿರ್ವಹಣೆ ತರಬೇತಿಯನ್ನೂ ನೀಡಲಾಗುತ್ತದೆ. ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ, ಕೃಷಿ, ಕಾಸರಗೋಡು ವತಿಯಿಂದ ತರಬೇತಿ ನೀಡಲಾಗುತ್ತದೆ. ಕಣ್ಣೂರು ಕೃಷಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುಧೀರ್ ನಾರಾಯಣನ್ ತರಗತಿ ಆರಂಭಿಸಿದರು. ತರಬೇತಿ ಕಾರ್ಯಕ್ರಮವು ಮೇ 19 ರಂದು ಮುಕ್ತಾಯಗೊಳ್ಳಲಿದೆ.