ಬದಿಯಡ್ಕ: ಬಾಲ್ಯದಲ್ಲಿ ನಾನು ಕಲಿತ ಈ ಶಾಲೆಯಲ್ಲಿ ಲಭಿಸಿದ ಪ್ರೋತ್ಸಾಹ ಇಂದು ಅನೇಕ ಸಾಧನೆಗಳನ್ನು ಮಾಡಲು ನನಗೆ ನೆರವಾಯಿತು. ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮಾಸ್ಟರ್ಸ್ ಇನ್ ಹಾಸ್ಪಿಟಲ್ ಎಡ್ಮಿನಿಸ್ಟ್ರೇಶನ್ ಎಂ.ಎಚ್.ಎ.ಯಲ್ಲಿ ಎರಡನೇ ರ್ಯಾಂಕ್ ಪಡೆದ ಹರ್ಷಿತಾ ಎನ್.ಜೋಗಿ ಬದಿಯಡ್ಕ ಹೇಳಿದರು.
ಶುಕ್ರವಾರ ಬದಿಯಡ್ಕ ಶ್ರೀ ಭಾರತೀವಿದ್ಯಾಪೀಠದಲ್ಲಿ ಜರಗಿದ ಸಮಾರಂಭದಲ್ಲಿ ಶಾಲೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಸಂಚಾಲಕ ಜಯಪ್ರಕಾಶ ಪಜಿಲ ಶಾಲು, ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಹಾಗೂ ಅಧ್ಯಾಪಿಕೆ ಸರೋಜ, ಅಧ್ಯಾಪಕ ವೃಂದ, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬದಿಯಡ್ಕ ವಿದ್ಯಾಪೀಠದಲ್ಲಿ ರ್ಯಾಂಕ್ ವಿಜೇತೆ ಹಳೆವಿದ್ಯಾರ್ಥಿನಿಗೆ ಅಭಿನಂದನೆ
0
ಏಪ್ರಿಲ್ 01, 2023