ಕಾಸರಗೋಡು: ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಾಂಸ್ಕøತಿಕ ಉತ್ಸವಕ್ಕೆ ಶ್ರೀ ದೈವಸ್ಥಾನದ ಆಡಳಿತ ಮೊಕ್ತೇಸರ ಎ. ರಮೇಶ್ ರೈ ಕೋಟೆಕುಂಜ ಅವರು ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿದರು.
ದೈವಸ್ಥಾನದ ಮೊಕ್ತೇಸರ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು, ಮಾಜಿ ಆಡಳಿತ ಮೊಕ್ತೇಸರ ಎ.ಮಂಜುನಾಥ ರೈ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ ಪದಾಧಿಕಾರಿಗಳಾದ ಲೋಕೇಶ್ ಎಂ. ಬಿ ಆಚಾರ್ ಕಂಬಾರ್, ಕೆ. ಜಗದೀಶ್ ಆಚಾರ್ಯ ಕಂಬಾರು ಉಪಸ್ಥಿತರಿದ್ದರು. ಬೆದ್ರಡ್ಕ ಶ್ರೀ ಅಯ್ಯಪ್ಪ ಮಹಿಳಾ ಸಂಘ ಇವರಿಂದ ಭಜನಾ ಸಂಕೀರ್ತನೆ, ಶ್ರೀ ರಾಮ ಯಕ್ಷಗಾನ ಕಲಾಸಂಘ ಬೆದ್ರಡ್ಕ ಇವರಿಂದ 'ಮತ್ಸ್ಯಾವತಾರ-ಅಗ್ರ ಪೂಜೆ' ಯಕ್ಷಗಾನ ಬಯಲಾಟ ನಡೆಯಿತು.
ಬೆದ್ರಡ್ಕ ವಾರ್ಷಿಕ ಜಾತ್ರಾ ಮಹೋತ್ಸವ-ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ
0
ಏಪ್ರಿಲ್ 01, 2023