ಕಾಸರಗೋಡು: ಕೇರಳ ರಾಜ್ಯ ಖಾಸಗಿ ಆಸ್ಪತ್ರೆ ನೌಕರರ ಫೆಡರೇಷನ್ (ಸಿಐಟಿಯು) ಆಶ್ರಯದಲ್ಲಿ ಏ. 27ರಂದು ಸೆಕ್ರೆಟೇರಿಯೆಟ್ ಎದುರು ನಡೆಯಲಿರುವ ಪ್ರತಿಭಟನಾ ಮೆರವಣಿಗೆ ಹಾಗೂ ಇದರ ಪ್ರಚಾರಾರ್ಥ ಏ.18ರಿಂದ 21ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ವಾಹನ ಪ್ರಚಾರ ಜಾಥಾ ಯಶಸ್ವಿಗೊಳಿಸುವಂತೆ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಮಾಧವನ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಸೆಕ್ರೆಟೇರಿಯೆಟ್ ಎದುರು ನಡೆಯುವ ಧರಣಿಯನ್ನು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ, ಸಂಸದ ಎಳಮರ ಕರೀಂ ಎಂಪಿ ಮತ್ತು ವಾಹನ ಜಾಥಾವನ್ನು ಮಾಜಿ ಕಾರ್ಮಿಕ ಸಚಿವ ಹಾಗೂ ಸಿಐಟಿಯು ರಾಜ್ಯ ಉಪಾಧ್ಯಕ್ಷ, ಶಾಸಕ ಟಿ.ಪಿ. ರಾಮಕೃಷ್ಣ ಉದ್ಘಾಟಿಸುವರು. ವಾಹನಪ್ರಚಾರ ಜಾಥಾ ಉದ್ಘಾಟನಾ ಕಾರ್ಯಕ್ರಮ ಏ. 16 ರಂದು 16:30 ಕ್ಕೆ ಕಾಸರಗೋಡು ಹೊಸ ಬಸ್ಟೆಂಟ್ ಆವರಣದಲ್ಲಿ ನಡೆಯಲಿದೆ.
2017 ರ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕನಿಷ್ಠ ವೇತನ ನೌಕರರಿಗೆ ತಕ್ಷಣವೇ ಲಭ್ಯವಾಗಬೇಕು, ಹಿಂದಿನ ಕನಿಷ್ಠ ವೇತನದ ಅವಧಿ ಮುಗಿದ ಸಂದರ್ಭದಲ್ಲಿ ವೇತನ ಪರಿಷ್ಕರಣೆಗೆ ತಕ್ಷಣದ ಹೊಸ ಕಾರ್ಯವಿಧಾನಗಳನ್ನು ಪ್ರಾರಂಭಿಸಬೇಕು, ಅಂಗಸಂಸ್ಥೆಗಳಲ್ಲಿ ವೇತನ ಪರಿಷ್ಕರಣೆ ತಕ್ಷಣದ ಅನುಷ್ಠಾನಗೊಳಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಪರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಕೋಶಾಧಿಕಾರಿ ವಿ.ವಿ ಬಾಲಕೃಷ್ಣನ್, ರಾಜ್ಯಸಭಾ ಸದಸ್ಯೆ ಸಿ. ಶೋಭಲತಾ ಉಪಸ್ಥಿತರಿದ್ದರು.
ಕೇರಳ ರಾಜ್ಯ ಖಾಸಗಿ ಆಸ್ಪತ್ರೆ ನೌಕರರ ಫೆಡರೇಷನ್ ವತಿಯಿಂದ ಸೆಕ್ರೆಟೇರಿಯೆಟ್ ಧರಣಿ
0
ಏಪ್ರಿಲ್ 12, 2023