ಕಾಸರಗೋಡು: ಕಳೆದ 17 ವರ್ಷಗಳಿಂದ ಕನ್ನಡ ನಾಡು ನುಡಿ ಸಂಸ್ಕøತಿಗಾಗಿ ದುಡಿಯುವ ರಂಗ ಚಿನ್ನಾರಿ ಸಂಸ್ಥೆಯ ಮಹಿಳಾ ಘಟಕ ನಾರಿ ಚಿನ್ನಾರಿ ಯ 2023- 24ರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಪದ್ಮಗಿರಿ ಕಲಾ ಕುಟೀರ ದಲ್ಲಿ ಜರಗಿತು .
ಗೌರವಾಧ್ಯಕ್ಷರಾಗಿ ತಾರಾ ಜಗದೀಶ್, ಸವಿತಾ ಟೀಚರ್ ಅಧ್ಯಕ್ಷೆ, ಡಾ. ಯು. ಮಹೇಶ್ವರಿ, ಮಾಲತಿ ಕಾಮತ್, ವಿಜಯಲಕ್ಷ್ಮಿ ಶ್ಯಾನುಭೋಗ್ ಉಪಾಧ್ಯಕ್ಷರು, ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯದರ್ಶಿ, ಉಷಾ ಟೀಚರ್, ಸರ್ವಮಂಗಳಾ ಎಸ್ ರಾವ್, ಶ್ಯಾಮಲಾ ರವಿರಾಜ್ ಜೊತೆ ಕಾರ್ಯದರ್ಶಿಗಳು, ವೀಣಾ ಅರುಣ್ ಶೆಟ್ಟಿ ಕೋಶಾಧಿಕಾರಿಮತ್ತು
ಸದಸ್ಯರಾಗಿ ಸ್ನೇಹಲತಾ ದಿವಾಕರ್, ಡಾ. ಕರುಣ ಅವಿನಾಶ್, ಬಬಿತಾ ರವಿಚಂದ್ರ, ಪುಷ್ಪಲತಾ ಆಳ್ವ, ಶ್ರೀಲತಾ ಮೈಲಾಟ್ಟಿ, ನಳಿನಾಕ್ಷಿ ಸತೀಶ್, ಮೀರಾ ಹರೀಶ್, ಗೀತಾ ಭಟ್,ಪುಷ್ಪಲತಾ ಆಳ್ವ, ಹೇಮಲತಾ ಶೆಟ್ಟಿ, ವೇದಾವತಿ, ಬಬಿತಾ, ಸುಜಾತ, ನೂತನ, ಜುಲೇಕ ಮಾಹಿನ್, ಸುಮಿತ್ರ ಎರ್ಪಕಟ್ಟೆ, ಗೀತಾ ರಾಮಚಂದ್ರ, ಸಿ. ಮೀರಾ ಕಾಮತ್, ಗಾಯತ್ರಿ ಗಣೇಶ್ ಪ್ರಭು, ತೇಜ ಕುಮಾರಿ ಎಂಬಿವರನ್ನು ಕಾರ್ಯಕಾರಿ ಸಮಿತಿಗೆ ಆರಿಸಲಾಯಿತು
ನಾರಿ ಚಿನ್ನಾರಿಯ ನಾಲ್ಕನೇ ಸರಣಿ ಕಾರ್ಯಕ್ರಮ ಮಕ್ಕಳ ಮತ್ತು ಮಹಿಳೆಯರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ "ರಂಗ ವಸಂತ'ಕಾರ್ಯಕ್ರಮ ಏ. 23 ರಂದು ಪದ್ಮಗಿರಿ ಕಲಾಕುಟೀರದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ನೇಹಲತಾ ದಿವಾಕರ್ ಸ್ವಾಗತಿಸಿದರು. ಸರ್ವಮಂಗಳಾ ಎಸ್ ರಾವ್ ವಂದಿಸಿದರು.
ರಂಗ ಚಿನ್ನಾರಿ ಸಂಸ್ಥೆಯ ಮಹಿಳಾ ಘಟಕ ನಾರಿ ಚಿನ್ನಾರಿ ನೂತನ ಪದಾಧಿಕಾರಿಗಳು
0
ಏಪ್ರಿಲ್ 16, 2023
Tags