HEALTH TIPS

ಇಂದೋರ್: ಧಾರ್ಮಿಕ ಘೋಷಣೆ ಕೂಗುವಂತೆ ಬಾಲಕನ ಮೇಲೆ ಹಲ್ಲೆ

 

            ಇಂದೋರ್‌: ಬಾಲಕರ ಗುಂಪೊಂದು 11 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಧಾರ್ಮಿಕ ಘೋಷಣೆ ಕೂಗಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಘಟನಾವಳಿಯನ್ನು ಆರೋಪಿ ಬಾಲಕರು ತಮ್ಮ ಫೋನ್‌ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.

                ಆರೋಪಿಗಳನ್ನು ಬಂಧಿಸಿ, ಅಪಹರಣ ಮತ್ತು ಕ್ರಿಮಿನಲ್‌ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಡಿಯೊವನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

             ವರದಿ ಪ್ರಕಾರ, ಸಂತ್ರಸ್ತ ಬಾಲಕ ಇಲ್ಲಿನ ನಿಪಾನಿಯಾ ಪ್ರದೇಶದಲ್ಲಿರುವ ಸ್ಟಾರ್‌ ಸ್ಕ್ವೇರ್‌ ಸಮೀಪ ಆಟವಾಡುತ್ತಿದ್ದ. ಈ ವೇಳೆ ಆತನನ್ನು ಬೈಪಾಸ್‌ ಕಡೆಗೆ ಎಳೆದೊಯ್ದು, ಬಟ್ಟೆ ಕಳಚಿ ಹಲ್ಲೆ ಮಾಡಲಾಗಿದೆ.

                         ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಕುಟುಂಬದವರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries