ನವದೆಹಲಿ: ದೇಶದ ವಿವಿಧ ಭಾಗಗಳಿಗೆ ಸಂಬಂಧಿಸಿದ 'ತಾಪಮಾನ ಸೂಚ್ಯಂಕ'ವನ್ನು ಪ್ರಾಯೋಗಿಕವಾಗಿ ನೀಡುವುದಕ್ಕೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಚಾಲನೆ ನೀಡಿದೆ.
ಐಎಂಡಿಯಿಂದ ಪ್ರಾಯೋಗಿಕವಾಗಿ 'ತಾಪಮಾನ ಸೂಚ್ಯಂಕ'
0
ಏಪ್ರಿಲ್ 29, 2023
Tags
ನವದೆಹಲಿ: ದೇಶದ ವಿವಿಧ ಭಾಗಗಳಿಗೆ ಸಂಬಂಧಿಸಿದ 'ತಾಪಮಾನ ಸೂಚ್ಯಂಕ'ವನ್ನು ಪ್ರಾಯೋಗಿಕವಾಗಿ ನೀಡುವುದಕ್ಕೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಚಾಲನೆ ನೀಡಿದೆ.
ಆಯಾ ಪ್ರದೇಶದಲ್ಲಿರುವ ಗಾಳಿಯ ಉಷ್ಣಾಂಶ ಹಾಗೂ ತೇವಾಂಶದ ಆಧಾರದ ಮೇಲೆ ಈ 'ತಾಪಮಾನ ಸೂಚ್ಯಂಕ'ವನ್ನು ನಿರ್ಧರಿಸಲಾಗುತ್ತದೆ ಎಂದು ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
'ಸದ್ಯ, ದಿನದ ಕನಿಷ್ಠ ಮತ್ತು ಗರಿಷ್ಠ ತಾಪಮಾನಗಳನ್ನು ನೀಡಲಾಗುತ್ತಿದೆ. ಮುಖ್ಯವಾಗಿ ಬಯಲು ಪ್ರದೇಶಗಳಿಗೆ ಸಂಬಂಧಿಸಿ ತಾಪಮಾನ ಸೂಚ್ಯಂಕ ಒದಗಿಸಲಾಗುತ್ತದೆ' ಎಂದು ಹೇಳಿದ್ದಾರೆ.
'ಭಾರತದ ನಗರಗಳಿಗೆ ಸಂಬಂಧಿಸಿ ಸಿದ್ಧಪಡಿಸುವ ಈ ಸೂಚ್ಯಂಕದ ದೃಢೀಕರಣಕ್ಕಾಗಿ ಇಲಾಖೆಯು ಆರೋಗ್ಯ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಬೇಕು' ಭೂವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್ ಹೇಳಿದ್ದಾರೆ.