ಮುಳ್ಳೇರಿಯ: ಕಾಸರಗೋಡು ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಮುಳಿಯಾರ್ ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಅಗ್ರಿನ್ಯೂಟ್ರಿಗಾರ್ಡನ್ ಮಾದರಿ ಕಟಾವು ನಡೆಸಲಾಯಿತು.
ಮುಳಿಯಾರು ಪಂಚಾಯತ್ ಅಧ್ಯಕ್ಷೆ ಪಿ.ವಿ.ಮಿನಿ ಕಾರ್ಯಕ್ರಮ ಉದ್ಘಾಟಿಸಿದರು. ಮುಳಿಯಾರ್ 11ನೇ ವಾರ್ಡ್ ನಲ್ಲಿ 2.5 ಎಕರೆ ಜಮೀನಿನಲ್ಲಿ ವಿಶೇಷ ಮಾದರಿಯಲ್ಲಿ ಸಾಗುವಳಿ ವ್ಯವಸ್ಥೆ ಮಾಡಲಾಗಿತ್ತು. ಅವರೆಕಾಯಿ, ಕಲ್ಲಂಗಡಿ, ಪಾಲಕ್, ಬೆಂಡೆ, ಸೌತೆ ಮತ್ತು ಕುಂಬಳಕಾಯಿ ಮೊದಲಾದ ತಳಿಗಳ ಹೈಬ್ರಿಡ್ ಬೀಜಗಳನ್ನು ಬಳಸಿ ಬೆಳೆಸಲಾಯಿತು. ಕಾರ್ತಿಕಾ, ಶ್ರೀಲಕ್ಷ್ಮಿ ಮತ್ತು ಜೆಎಲ್‍ಜಿ ಗುಂಪುಗಳ ಉಸ್ತುವಾರಿಯಲ್ಲಿ ಸಾಗುವಳಿ ನಡೆಸಲಾಯಿತು.
ಪಂಚಾಯಿತಿ ಸದಸ್ಯೆ ಸತ್ಯವತಿ ಅಧ್ಯಕ್ಷತೆ ವಹಿಸಿದ್ದರು. ಡಿಎಂಸಿ ಸಿ.ಎಚ್.ಇಕ್ಬಾಲ್ ಮುಖ್ಯ ಅತಿಥಿಯಾಗಿದ್ದರು. ಸಿಡಿಎಸ್ ಅಧ್ಯಕ್ಷೆ ಖೈರುನ್ನೀಸಾ, ವಾರ್ಡ್ ಸದಸ್ಯರಾದ ಶ್ಯಾಮಲಾ ಮತ್ತು ನಾರಾಯಣಿಕುಟ್ಟಿ, ಸಿಡಿಎಸ್ ಸದಸ್ಯೆ ನಿರ್ಮಲಾ ಮತ್ತು ರೀನಾ, ಸಿಡಿಎಸ್ ಲೆಕ್ಕಾಧಿಕಾರಿ ಸಕೀನಾ, ಬ್ಲಾಕ್ ಸಂಯೋಜಕಿ ರಮ್ಯಾ ಉಪಸ್ಥಿತರಿದ್ದರು.
ಮುಳಿಯಾರಲ್ಲಿ ಅಗ್ರಿನ್ಯೂಟ್ರಿಗಾರ್ಡನ್ ಮಾದರಿ ಪ್ಲಾಟ್ ಕೊಯ್ಲು
0
ಏಪ್ರಿಲ್ 06, 2023