ಕಾಸರಗೋಡು: ನೀಲೇಶ್ವರ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಗಾಘಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಅವರು ಅಜನೂರು ಗ್ರಾಮ ಪಂಚಾಯಿತಿ ಯೋಜನೆಯನ್ವಯ ಮಂಜೂರದ ಶಾಲಾ ಸಭಾಭವನವನ್ನು ಉದ್ಘಾಟಿಸಿದರು.
ಅಜಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜ್ ಮೋಹನ್ ಅವರು ಶಾಲೆಗೆ ಪೀಠೋಪಕರಣಗಳನ್ನು ಹಸ್ತಾಂತರಿಸಿದರು. ಲೋಕೋಪಯೋಗಿ ಇಲಾಖೆ ಕಟ್ಟಡ ವಿಭಾಗ ಕಾರ್ಯಪಾಲಕ ಅಭಿಯಂತರ ಚಂದ್ರಾಂಗದನ್ ವರದಿ ಮಂಡಿಸಿದರು.
ಅಜಾನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಸಬೀಶ್ ಶಾಲೆಯ ರೇಡಿಯೋ ಸ್ಟೇಷನ್‍ಗೆ ಚಾಲನೆ ನೀಡಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಮೀನಾ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶೈಬಾ ಉಮೇರಿ, ಕಾಞಂಗಾಡಿ ಬ್ಲಾಕ್ ಪಂಚಾಯತ್ ಸದಸ್ಯರಾದ ಎ.ದಾಮೋದರನ್, ಎಂ.ಜಿ.ಪುಷ್ಪಾ, ಗುತ್ತಿಗೆದಾರ ಬದರುದ್ದೀನ್, ಶಿಕ್ಷಕ ಪೆÇೀಷಕ ಸಮಿತಿ ಅಧ್ಯಕ್ಷ ಪಿ.ವಿ.ಅಜಯನ್, ಎಸ್‍ಎಂಸಿ ಅಧ್ಯಕ್ಷ ಕೆ. ಸುರೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ. ವೇಲಶ್ವರಂ ಉಪಸ್ಥಿvತರಿದ್ದರು. ಜಿಯುಪಿ ಶಾಲೆಯ ಪ್ರಾಂಶುಪಾಲ ಸಿಪಿವಿ ವಿನೋದ್ ಕುಮಾರ್ ಸ್ವಾಗತಿಸಿದರು. ಹಿರಿಯ ಸಹಾಯಕ ಪಿ ಪಿ ಜಯನ್ ವಂದಿಸಿದರು.
ನೀಲೇಶ್ವರ ಜಿಯುಪಿ ಶಾಲೆಯಲ್ಲಿ ನೂತನ ಬ್ಲಾಕ್ ಮತ್ತು ಸಭಾ ಭವನ ಉದ್ಘಾಟನೆ
0
ಏಪ್ರಿಲ್ 10, 2023