ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್‍ನ ಯೋಜಿತ ಬುಡಕಟ್ಟು ಸುಸ್ಥಿರ ಅಭಿವೃದ್ಧಿ ಯೋಜನೆಯ ಅಂಗವಾಗಿ ಜಿಲ್ಲಾ ಕ್ಷಯರೋಗ ಕೇಂದ್ರದ ಆಶ್ರಯದಲ್ಲಿ ಬಳಾಲ್ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್‍ನಲ್ಲಿ ಕ್ಷಯರೋಗ(ಟಿಬಿ)ದ ಬಗ್ಗೆ ಜಾಗೃತಿ ತರಗತಿ ಮತ್ತು ರೋಗನಿರ್ಣಯ ಶಿಬಿರವನ್ನು ಆಯೋಜಿಸಲಾಗಿತ್ತು.
ಬಳಾಲ್ ಸಮುದಾಯ ಕೇಂದ್ರದಲ್ಲಿ "ಅಕ್ಷಯಶ್ರೀ'ಎಂಬ ಹೆಸರಲ್ಲಿ ನಡೆದ ಅಭಿಯಾನವನ್ನು ಬಳಾಲ್ ಗ್ರಾಮ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಉದ್ಘಾಟಿಸಿದರು. 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೆ ಸರ್ಕಾರ ಆಂದೋಲನ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಇಂತಹ ಶಿಬಿರ ನಡೆಸುವುದು ಉತ್ತಮ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕ್ಷಯರೋಗ ಅಧಿಕಾರಿ ಡಿ. ಮುರಳೀಧರ ನಲ್ಲೂರಾಯ, ವಾರ್ಡು ಸದಸ್ಯೆ ಕೆ. ಅಜಿತಾ, ವೆಳ್ಳರಿಕುಂಡ್ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆರ್ಲಿನ್, ಕುಟುಂಬಶ್ರೀ ಟ್ರೈಬಲ್ ಡಿಪಿಎಂ ರತ್ನೇಶ್, ಜೆಎಚ್‍ಐ ನಿರೋಷಾ, ಹಿರಿಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಶಾಜಿಜೋಸೆಫ್, ಜೆಇಟಿ ಮುಖ್ಯಸ್ಥ ಪಿ. ಪ್ರವೀಣಾ, ಸ್ನೇಹಿತಾ ಸಲಹೆಗಾರ್ತಿ ಶೋಭನಾ, ಸಮುದಾಯ ಸಲಹೆಗಾರ ಜೀನಿಜೋಸೆಫ್, ಆನಿಮೇಟರ್ ಎಚ್. ಸುಶೀಲಾ ಉಪಸ್ಥಿತರಿದ್ದರು. ಡಾ.ಕೆರ್ಲಿನ್ ಟಿಬಿ ಜಾಗೃತಿ ಕುರಿತು ತರಗತಿ ನಡೆಸಿದರು. ಕ್ಷಯರೋಗದ ಬಗ್ಗೆ ಮಾಹಿತಿಯುಳ್ಳ ಜಾದೂ ಪ್ರದರ್ಶನವನ್ನು ಜಿಲ್ಲಾ ಎಸಿಎಸ್‍ಎಂ ಅಧಿಕಾರಿ ಎಸ್. ರಜನಿಕಾಂತ್ ಪ್ರದರ್ಶಿಸಿದರು.
ಕ್ಷಯರೋಗ ಜಾಗೃತಿ ತರಗತಿ, ರೋಗನಿರ್ಣಯ ಶಿಬಿರ
0
ಏಪ್ರಿಲ್ 19, 2023