HEALTH TIPS

ಹುಲಿ ಯೋಜನೆಯ ಸುವರ್ಣ ಮಹೋತ್ಸವ: ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಐಬಿಸಿಎಗೆ ಚಾಲನೆ

 

         ಮೈಸೂರು: ಹುಲಿ ಯೋಜನೆ ಯಶಸ್ಸು ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಹೆಮ್ಮೆಯ ವಿಚಾರವಾಗಿದೆ. ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷ ಪೂರ್ಣಗೊಳಿಸಿದೆ. ಇದೇ ಸಮಯದಲ್ಲಿ ವಿಶ್ವದ ಹುಲಿ ಸಂಖ್ಯೆಯಲ್ಲಿ ಶೇ. 75 ರಷ್ಟು ಭಾರತದಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

             ಇಲ್ಲಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆ ಸುವರ್ಣ ಮಹೋತ್ಸವ ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆಗೊಳಿಸಿ,ಅಂತಾರಾಷ್ಟ್ರೀಯ ದೊಡ್ಡ ಬೆಕ್ಕು ಮೈತ್ರಿ ಐಬಿಸಿಎಗೆ ಚಾಲನೆ ನೀಡಿದ ಪ್ರಧಾನಿ, ವಿಶ್ವದ ಏಳು ದೊಡ್ಡ ಬೆಕ್ಕು ಜಾತಿಯ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಫೂಮಾ, ಜಾಗ್ವಾರ್ ಮತ್ತು ಚಿರತೆಗಳ ಸಂರಕ್ಷಣೆಯತ್ತ ಐಬಿಸಿಎ ಗಮನ ಹರಿಸಲಿದೆ ಎಂದು  ಹೇಳಿದರು. ಈ ಜಾತಿಯ ವನ್ಯಜೀವಿಗಳಿಗೆ ಆಶ್ರಯ ನೀಡಿರುವ 97 ದೇಶಗಳು ಈ ಮೈತ್ರಿಗೆ  ಸೇರಲು ಅವಕಾಶವಿದೆ.


             ಪ್ರಾಜೆಕ್ಟ್ ಟೈಗರ್ ಹುಲಿಗಳ ರಕ್ಷಣೆ ಮತ್ತು ಸಂರಕ್ಷಣೆಯ ಮಾರ್ಗವಾಗಿದೆ. ಇದು ಪ್ರಕೃತಿ ಪೂಜಿಸುವ ಭಾರತದ ಸಂಸ್ಕೃತಿಯ ಭಾಗವಾಗಿದೆ.  ಹುಲಿ ಯೋಜನೆ 50 ವರ್ಷ ಪೂರ್ಣಗೊಳಿಸಿರುವುದು ಅತ್ಯಂತ ಮಹತ್ವದ ಮೈಲಿಗಲ್ಲು ಆಗಿದೆ. ಭಾರತದ ಹುಲಿಗಳನ್ನು ಮಾತ್ರ ರಕ್ಷಿಸುತ್ತಿಲ್ಲ. ಅವುಗಳು  ಪ್ರವರ್ಧಮಾನಕ್ಕೆ ಬರಲು ಅತ್ಯುತ್ತಮ ಪರಿಸರ ವ್ಯವಸ್ಥೆಯನ್ನು ನೀಡಿದೆ ಎಂದರು.

              ದಶಕಗಳ ಹಿಂದೆಯೇ ಭಾರತದಲ್ಲಿ ಚಿರತೆಗಳು ಅಳಿದು ಹೋಗಿದ್ದವು. ನಾವು ಈ ಭವ್ಯವಾದ ದೊಡ್ಡ ಬೆಕ್ಕನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದಿದ್ದೇವೆ. ಇದು ದೊಡ್ಡ ಬೆಕ್ಕಿನ ಮೊದಲ ಯಶಸ್ವಿ ಸ್ಥಳಾಂತರವಾಗಿದೆ.  ಸುಮಾರು 30,000 ಆನೆಗಳನ್ನು ಹೊಂದಿರುವ ಭಾರತ ವಿಶ್ವದ ಅತಿದೊಡ್ಡ ಏಷ್ಯಾ ಶ್ರೇಣಿ ಆನೆ ದೇಶವಾಗಿದೆ ಎಂದು ಅವರು ತಿಳಿಸಿದರು. 

            1973 ರಲ್ಲಿ 9 ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ ಪ್ರಾರಂಭವಾದ ಹುಲಿ ಸಂರಕ್ಷಣಾ ಯೋಜನೆ ಪ್ರಧಾನಿ ನೇತೃತ್ವದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ 53 ರಕ್ಷಿತಾರಣ್ಯಗಳಿಗೆ ತಲುಪಿದೆ. 23 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ ಎಂದು  ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಮಾಹಿತಿ ನೀಡಿದರು.

                  ಇದೇ ಸಂದರ್ಭದಲ್ಲಿ  ಹೊಸ ಹುಲಿ ಗಣತಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಹೊಸ ಹುಲಿ ಗಣತಿ ಮಾಹಿತಿ ಪ್ರಕಾರ ದೇಶದಲ್ಲಿ 3,167 ಹುಲಿಗಳಿರುವುದಾಗಿ ಹೇಳಲಾಗಿದೆ. ಡೇಟಾ ಪ್ರಕಾರ, 2006ರಲ್ಲಿ 1,411 ಹುಲಿಗಳಿದ್ದರೆ, 2010ರಲ್ಲಿ 1,706,  2014ರಲ್ಲಿ 2,226, 2018ರಲ್ಲಿ 2,967 ಮತ್ತು 2022 ರಲ್ಲಿ 3,167 ಹುಲಿಗಳಿರುವುದಾಗಿ ಮಾಹಿತಿ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಮುಂದಿನ 25 ವರ್ಷಗಳ ಹುಲಿ ಸಂರಕ್ಷಣೆಯ ದೂರದೃಷ್ಟಿವುಳ್ಳ  'ಅಮೃತ ಮಹೋತ್ಸವದ ಹುಲಿ ವಿಷನ್'' ಕಿರುಹೊತ್ತಿಗೆಯನ್ನು ಮೋದಿ ಬಿಡುಗಡೆ ಮಾಡಿದರು.

Karnataka | With only 2.4% of the world's land area, India contributes to about 8% of the known global diversity. Cheetahs had become extinct in India decades ago. We brought this magnificent big cat to India from Namibia and South Africa. This is the first successful…
Image

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries