ಮಕ್ಕಳ ಹಲ್ಲುಜ್ಜುವುದು ಪೋಷಕರಿಗೆ ಅತೀ ದೊಡ್ಡ ಕೆಲಸ ಅಂತಾನೇ ಹೇಳಬಹುದು. ಚಿಕ್ಕ ಮಕ್ಕಳು ಹೇಳಿದ ಮಾತನ್ನು ಕೇಳೋದಿಲ್ಲ. ಹೀಗಾಗಿ ಅವರನ್ನು ಒಂದು ಕಡೆ ಕೂರಿಸಿ ಹಲ್ಲುಜ್ಜುವುದಕ್ಕೆ ಪೋಷಕರು ಹರ ಸಾಹಸವೇ ಪಡಬೇಕಾಗುತ್ತದೆ. ಸಾಮಾನ್ಯವಾಗಿ ಮಕ್ಕಳಿಗೆ ಅತಿ ಚಿಕ್ಕ ವಯಸ್ಸಿನಲ್ಲಿ ಹಲ್ಲುಜ್ಜುವ ಅಭ್ಯಾಸ ಮಾಡಿಸಿದರೆ ತುಂಬಾನೇ ಒಳ್ಳೆಯದು. ಇಲ್ಲದಿದ್ದರೆ ಹಲ್ಲು ಹುಳುಕಾಗುವಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಮಕ್ಕಳಿಗೆ ಹಲ್ಲುಜ್ಜುವುದನ್ನು ಕಲಿಸೋದು ಹೇಗೆ? ತಿಳಿಯೋಣ.
ಮಗುವಿನ ಹಲ್ಲಿನ ಕಾಳಜಿ ವಹಿಸೋದು ಎಷ್ಟು ಮುಖ್ಯ?
* ಹಲ್ಲುಜ್ಜುವುದರಿಂದ ಹಲ್ಲಿನ ನೈರ್ಮಲ್ಯವನ್ನು ಕಾಪಾಡಬಹುದು. ಹಾಗೂ ಹಲ್ಲು ಹುಳುಕಾಗುವುದನ್ನು ತಡೆಯುತ್ತದೆ
* ಹಲ್ಲು ಆರೋಗ್ಯವಾಗಿದ್ರೆ ಆಹಾರ ಜಗಿಸಲು ಹಾಗೂ ಸರಿಯಾಗಿ ಮಾತನಾಡಲು ಸಹಾಯವಾಗುತ್ತದೆ
* ದವಡೆ ಹಾಗೂ ವಸಡುಗಳನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ
* ಆರೋಗ್ಯಕರ ಒಸಡುಗಳು ನಿಮ್ಮ ಮಗುವಿನಲ್ಲಿ ಸರಿಯಾದ ಹಲ್ಲುಗಳ ಜೋಡಣೆಗೆ ಕಾರಣವಾಗುತ್ತದೆ
ಮಗುವಿಗೆ ಹಲ್ಲುಜ್ಜಲು ಕಲಿಸೋದು ಹೇಗೆ?
* ಮೊದಲಿಗೆ ಮಗುವನ್ನು ಕನ್ನಡಿಯ ಮುಂಭಾಗ ನಿಂತುಕೊಳ್ಳಲು ಹೇಳಿ
* ನಿಧಾನವಾಗಿ ವೃತ್ತಾಕಾರವಾಗಿ ಹಲ್ಲುಜ್ಜಲು ಕಲಿಸಿ. ಈ ಸಮಯದಲ್ಲಿ ಮಗುವಿಗೆ ನೋವಾಗದಂತೆ ಜಾಗೃತೆ ವಹಿಸಿ
* ಹಿಂಭಾಗದ ಹಲ್ಲುಗಳಿಂದ ಆರಂಭಿಸಿ ಮುಂಭಾಗದ ಹಲ್ಲುಗಳನ್ನು ಉಜ್ಜಿರಿ
* ಒಸಡಿನ ಅಂಚುಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಿ.
* ನಾಲಿಗೆಯಲ್ಲಿರುವ ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸಿ
* ಇನ್ನೂ ಟೂತ್‌ಪೇಸ್ಟ್ ಅನ್ನು ಉಗುಳಲು ಹೇಳಿ. ಕೆಲ ಮಕ್ಕಳು ಟೂತ್‌ಪೇಸ್ಟ್ ನುಂಗುತ್ತವೆ.
* ಮಗುವಿನ ಕೈಯಿಂದಲೇ ಬ್ರಷ್ ಸ್ವಚ್ಛ ಗೊಳಿಸೋದಕ್ಕೆ ತಿಳಿಸಿ ಹಾಗೂ ನಂತರ ಅದನ್ನು ಒಣಗಲು ಬಿಡಿ.
* ಇನ್ನೂ ಹಲ್ಲುಜ್ಜಿ ಆದ ನಂತರ ಸಿಂಕ್ ಸ್ವಚ್ಛ ಮಾಡೋದನ್ನು ಹೇಳಿ ಕೊಡಿ
ಮಕ್ಕಳನ್ನು ಹಲ್ಲುಜ್ಜುವಂತೆ ಪ್ರೋತ್ಸಾಹಿಸೋದು ಹೇಗೆ?
ಮಕ್ಕಳನ್ನು ಹಲ್ಲುಜ್ಜುವಂತೆ ಮಾಡೋದು ಎಷ್ಟು ದೊಡ್ಡ ಕೆಲಸ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತೇ ಇದೆ. ಬೆಳಗ್ಗೆ ಎದ್ದ ತಕ್ಷಣ ಅವರ ಮುಖ ತೊಳೆಸೋದು ಪೋಷಕರಿಗೆ ಹರ ಸಾಹಸವಾಗಿ ಬಿಡುತ್ತೆ. ಇನ್ನೂ ಹಲ್ಲುಜ್ಜೋದಕ್ಕೆ ಖಂಡಿತ ಒಪ್ಪಿಕೊಳ್ಳೋದಿಲ್ಲ. ಕೆಲವೊಂದು ಸಲ ಬಲವಂತವಾಗಿ ಮಕ್ಕಳನ್ನು ಹಿಡಿದು ಹಲ್ಲುಜ್ಜಲಾಗುತ್ತದೆ. ಹೀಗಾಗಿ ಮಕ್ಕಳು ಪ್ರತಿನಿತ್ಯ ಅವರಾಗಿಯೇ ಹಲ್ಲುಜ್ಜುವಂತೆ ಮಾಡಬೇಕಾದರೆ ಈ ಟಿಪ್ಸ್ ಫಾಲೋ ಮಾಡಿ.
* ನಿಮ್ಮ ಮಗುವನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿ ಅವರಲ್ಲಿ ಬ್ರಷ್ ಅನ್ನು ಆಯ್ಕೆ ಮಾಡಲು ತಿಳಿಸಿ. ಅವರಿಗೆ ಮೆಚ್ಚುಗೆಯಾಗುವ ಬಣ್ಣದ ಬ್ರಷ್ ಖಂಡಿತ ಆಯ್ಕೆ ಮಾಡುತ್ತಾರೆ.
* ಇನ್ನೂ ದೊಡ್ಡವರಿಗೆ ಬಳಸುವ ಟೂಥ್‌ಪೇಸ್ಟ್ ಬೇಡ. ಮಕ್ಕಳಿಗಾಗಿ ಸಿಗುವ ಪೇಸ್ಟ್‌ಗಳು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಇರುತ್ತದೆ. ಹೀಗಾದಾಗ ಅವರೇ ಆಸಕ್ತಿಯಿಂದ ಹಲ್ಲುಜ್ಜಲು ಸಿದ್ಧರಾಗುತ್ತಾರೆ
* ನೀವು ಹಲ್ಲುಜ್ಜುವ ಸಮಯದಲ್ಲೇ ಮಗುವನ್ನು ಕರೆದುಕೊಂಡು ಹೋಗಿ. ನಿಮ್ಮ ಜೊತೆಗೆ ನಿಮ್ಮಂತೆಯೇ ಹಲ್ಲುಜ್ಜುವಂತೆ ತಿಳಿಸಿ. ಖಂಡಿತ ಅವರಿಗೆ ಇಷ್ಟವಾಗುತ್ತದೆ.

ಒಟ್ಟಿನಲ್ಲಿ ಚಿಕ್ಕವಯಸ್ಸಿನಲ್ಲಿ ಮಕ್ಕಳ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳೋದು ಪೋಷಕರ ಕರ್ತವ್ಯ. ಮಕ್ಕಳಿಗೆ ಬುದ್ಧಿ ಬೆಳೆಯುತ್ತಿರುವ ಸಂದರ್ಭದಲ್ಲೇ ಹಲ್ಲುಜ್ಜುವ ಬಗ್ಗೆ ಜಾಗೃತಿಯನ್ನು ಮೂಡಿಸಿ.