ಕಾಸರಗೋಡು: ವಂದೇ ಭಾರತ್ ಎಕ್ಸ್‍ಪ್ರೆಸ್‍ನ ಓಡಾಟವನ್ನು ಕಾಸರಗೋಡು ವರೆಗೆ ವಿಸ್ತರಿಸದೆ ಕಣ್ಣೂರಿಗೆ ಸೀಮಿತಗೊಳಿಸಿರುವುದು ಕಾಸರಗೋಡು ಜಿಲ್ಲೆಯ ಬಗ್ಗೆ ನಿರಂತರ ನಡೆಸುತ್ತಿರುವ ನಿರ್ಲಕ್ಷ್ಯ ಧೋರಣೆಗೆ ಉದಾಹರಣೆಯಾಗಿದೆ ಎಂದು ಮುಸ್ಲಿಂ ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಜೀಜ್ ಕಳತ್ತೂರ್ ಹಾಗೂ ಸಹೀರ್ ಅಸೀಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಹಾಗೂ ರಾಜ್ಯದಲ್ಲಿ ಎಡಪಕ್ಷ ಆಡಳಿತ ನಡೆಸುತ್ತಿರುವುದು ಕಾಸರಗೋಡು ಜಿಲ್ಲೆಗೆ ಸವಾಲಾಗಿದ್ದು, ಉಭಯ ಸರ್ಕಾರಗಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಟಿಕಿಸಿದರು. ಯುಪಿಎ-ಯುಡಿಎಫ್ ಸರ್ಕಾರದ ಅವಧಿಯಲ್ಲಿ ಮಾತ್ರ ಜಿಲ್ಲೆ ರೈಲ್ವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಾಣುವಂತಾಗಿದೆ ಎಂದು ತಿಳಿಸಿದ್ದಾರೆ.
ವಂದೇ ಭಾರತ್ ರೈಲು: ಬಿಜೆಪಿ, ಎಡರಂಗ ಸರ್ಕಾರ ಕಾಸರಗೋಡಿಗೆ ಶಾಪ-ಮುಸ್ಲಿಂ ಯೂತ್‍ಲೀಗ್
0
ಏಪ್ರಿಲ್ 16, 2023