ಮಂಜೇಶ್ವರ: ಮೀಂಜ ಕುಳಬೈಲು ನಡುಗುಡ್ಡೆ ಶ್ರೀ ವನಶಾಸ್ತಾರ, ವನದುರ್ಗೆ,ನಾಗ, ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಮೀಯಪದವಿನ ಖ್ಯಾತ ವೈದ್ಯ ಡಾ. ಯಸ್.ಯನ್. ಭಟ್ ಶ್ರೀಕ್ಷೇತ್ರದಲ್ಲಿ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಕಾರ್ಯಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ, ಚಿಗುರುಪಾದೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ವನಶಾಸ್ತಾರ ಕ್ಷೇತ್ರದ ಗೌರವ ಅಧ್ಯಕ್ಷ ಟಿ. ಡಿ ಸದಾಶಿವ ರಾವ್, ಅಧ್ಯಕ್ಷ ಪೂವಪ್ಪ ಟಿ ಕುಳಬೈಲು, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕೆ. ಎಂ, ಕಾಸರಗೋಡು ಜಿಲ್ಲಾ ಧರ್ಮಜಾಗರಣ ಸಂಯೋಜಕ ತಿಮ್ಮಪ್ಪ ಮೈತಾಳ್ ಉಪಸ್ಥಿತರಿದ್ದರು. ಈ ಸಂದರ್ಭ ಪುಷ್ಪ ಅವರು ಬ್ರಹ್ಮ ಕಲಾಶೋತ್ಸವಕ್ಕೆ ಮೊದಲ ದೇಣಿಗೆ ನೀಡಿದರು.