ಪೆರ್ಲ: ವಿಷು ಮಹೋತ್ಸವದ ಅಂಗವಾಗಿ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ 'ತಪ್ಪಂಗಾಯಿ'ಸ್ಪರ್ಧೆ ನಡೆಯಿತು. ದೇವಸ್ಥಾನದಲ್ಲಿ ಪ್ರತಿವರ್ಷ ವಿಷು ಮಹೋತ್ಸವದಂದು ತಪ್ಪಂಗಾಯಿ ವಿಶೇಷ ಸ್ಪರ್ಧೆ ಆಯೋಜಿಸಲಾಗುತ್ತಿದೆ.
ಹಿರಿಯರು, ಯುವಕರು, ಎಳೆಯ ಮಕ್ಕಳು ತಪ್ಪಂಗಾಯಿ ಸಪರ್ಧಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಎಣ್ಣೆಯಲ್ಲಿ ಅದ್ದಿದ ನುಣುಪಾದ ತೆಂಗಿನ ಕಾಯಿಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರರು ಜನರ ಮಧ್ಯೆ ಎಸೆಯುತ್ತಿದ್ದು, ಇದನ್ನು ದೇವಸ್ಥಾನದ ಹೊರಾಂಗಣ ಗೋಪುರಕ್ಕೆ ಸುತ್ತುಬಂದು ಬಲಿಕಲ್ಲಿಗೆ ಒಡೆಯುವುದು ವಾಡಿಕೆ. ಈ ರೀತಿ ಕೈಗೆ ಲಭಿಸುವ ಕಾಯಿಯನ್ನು ಒಬ್ಬರಿಂದ ಒಬ್ಬರು ಕಿತ್ತು ತೆಗೆದು ಬಲಿಕಲ್ಲಿಗೆ ಒಡೆಯಲು ಪೈಪೋಟಿ ನಡೆಸುವ ಮೂಲಕ ತಪ್ಪಂಗಾಯಿ ಸ್ಪರ್ಧೆ ನಡೆಯುತ್ತದೆ. ಮೋಜಿಗಾಗಿ ತಪ್ಪಂಗಾಯಿ ಸ್ಪರ್ಧೆ ನಡೆಸಲಾಗುತ್ತಿದೆ. ಈ ಸಂದರ್ಭ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು. ನೂರಾರು ಮಂದಿ ಭಕ್ತಾದಿಗಳು ವಿಷುಕಣಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಬಜಕೂಡ್ಲು ದೇವಾಲಯದಲ್ಲಿ ವಿಷು ಮಹೋತ್ಸವ, 'ತಪ್ಪಂಗಾಯಿ' ಸ್ಪರ್ಧೆ
0
ಏಪ್ರಿಲ್ 15, 2023