ಕಾಸರಗೋಡು: ವಿವಿಧ ಸಮುದಾಯಗಳ ನಡುವೆ ಪ್ರೀತಿ, ಸೌಹಾರ್ದ ಹಂಚುವ ಕೆಲಸ ಹಬ್ಬಗಳ ಮೂಲಕ ನಡೆದುಬರಬೇಕು ಎಂಬುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ. ಅವರು ಕಾಸರಗೋಡು ಪ್ರೆಸ್ ಕ್ಲಬ್‍ನಲ್ಲಿ ಕೇರಳ ಮುಸ್ಲಿಂ ಜಮಾತ್ ಬುಧವಾರ ಆಯೋಜಿಸಿದ್ದ ಮಾಧ್ಯಮ ಸೌಹಾರ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಹಬ್ಬ, ಹರಿದಿನಗಳು ಜನರನ್ನು ಒಟ್ಟಿಗೆ ಸೇರಿಸುತ್ತವೆ ಮತ್ತು ಸಮುದಾಯಗಳ ನಡುವಿನ ಸ್ನೇಹಬಾಂಧವ್ಯ ಹೆಚ್ಚಿಸುತ್ತದೆ. ಈ ವರ್ಷ ಈಸ್ಟರ್, ವಿಷು, ರಂಜಾನ್ ಹಬ್ಬಗಳು ಜತೆಯಾಗಿ ಆಗಮಿಸಿದ್ದು, ಎಲ್ಲ ಸಮುದಾಯದ ಜನರು ಒಟ್ಟಾಗಿ ಬೆರೆತು ಹಬ್ಬ ಆಚರಿಸುವಮತಾಗಬೇಕು ಎಂದು ತಿಳಿಸಿದರು.
ಕೇರಳ ಮುಸ್ಲಿಂ ಜಮಾತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಸುಲೈಮಾನ್ ಕರಿವೆಳ್ಳೂರು ವಿಷಯ ಮಂಡಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಂ, ಕೊಲ್ಲಂಬಾಡಿ ಅಬ್ದುಲ್ ಖಾದಿರ್ ಸಅದಿ, ದೇಳಿ ಸಲಾಂ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಕೆ.ವಿ.ಪದ್ಮೇಶ್, ಪಿ. ನಹಾಸ್, ಫೈಸಲ್ ಬಿನ್ ಅಹ್ಮದ್, ಟಿ.ಎ.ಶಾಫಿ, ಎ.ಎಸ್.ಮುಹಮ್ಮದ್‍ಕುಞÂ ಉದುಮ, ಅಬ್ದುಲ್ಲಕುಞÂ ಉದುಮ, ಮುಜೀಬ್ ಅಹ್ಮದ್, ಶಫೀಕ್ ನಸ್ರುಲ್ಲ, ರವೀಂದ್ರನ್ ರಾವಣೇಶ್ವರಂ, ರಾಜೇಶ್ ಮಾಙËಡ್, ಮುಜೀಬ್ ಕಳನಾಡ್, ಶರೀಫ್ ಕರಿಪೆÇೀಡಿ, ಕೃಷ್ಣ ದಾಸ್ ಎರೋಲ್, ಟಿ ಕೆ ಪ್ರಭಾಕರನ್, ಡಿಟ್ಟಿ ವರ್ಗೀಸ್, ಜಿಬಿನ್ ಚೆಂಬೋಲ, ಮಣಿಕಂಠನ್, ಅಚ್ಚು ಕಾಸರಗೋಡು, ರಾಜಶೇಖರ, ವಿನಯಕುಮಾರ್, ಗಣೇಶ್, ರಂಜು ಕಾಸರಗೋಡು, ಬಶೀರ್ ಪುಲಿಕೂರು, ಮುಹಮ್ಮದ್ ಟಿಪ್ಪು ನಗರ ಉಪಸ್ಥಿತರಿದ್ದರು.
ಎಸ್ ವೈಎಸ್ ಜಿಲ್ಲಾಧ್ಯಕ್ಷ ಕಾಟಿಪಾರ ಅಬ್ದುಲ್ ಖಾದಿರ್ ಸಖಾಫಿ ಸ್ವಾಗತಿಸಿದರು. ಕೇರಳ ಮುಸ್ಲಿಂ ಜಮಾತ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಸಿ.ಎಲ್ ಹಮೀದ್ ವಂದಿಸಿದರು.
ಹಬ್ಬಗಳ ಮೂಲಕ ಸೌಹಾರ್ದ ಹಂಚುವ ಕೆಲಸ ನಡೆಯಬೇಕು-ಶಾಸಕ ಎನ್ ಎ ನೆಲ್ಲಿಕುನ್ನು ಅಭಿಪ್ರಾಯ
0
ಏಪ್ರಿಲ್ 14, 2023
Tags