ನಿದ್ದೆ...ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕ. ಇಡೀ ದಿನ ಉಲ್ಲಾಸದಾಯಕವಾಗಿ ಕೆಲಸ ಮಾಡಲು ಶಕ್ತಿ ಬೇಕಾದ್ರೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡುವುದು ತುಂಬಾ ಮುಖ್ಯ. ಇದಕ್ಕಾಗಿ, ನೀವು ಸರಿಯಾದ ದಿಕ್ಕಿಗೆ ತಲೆ ಹಾಕಿ ಮಲಗಬೇಕು. ಆಗ ಮಾತ್ರ ರಾತ್ರಿ ಸಂಪೂರ್ಣ ನಿದ್ದೆಯಾಗಿ ಮರುದಿನ ಬೆಳಿಗ್ಗೆ ಪೂರ್ಣ ಶಕ್ತಿಯಿಂದ ಎಚ್ಚರಗೊಳ್ಳಲು ಸಾಧ್ಯವಾಗುತ್ತದೆ. ಹಾಗಾದ್ರೆ ಒಳ್ಳೆಯ ನಿದ್ದೆಗೆ ಯಾವ ದಿಕ್ಕಿನ ಕಡೆಗೆ ತಲೆ ಹಾಕಿ ಮಲಗ್ಬೇಕು ಗೊತ್ತಾ?
ವಾಸ್ತು ಶಾಸ್ತ್ರದ ಪ್ರಕಾರ ಮಲಗುವಾಗ ಪೂರ್ವ ಮತ್ತು ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದು ಉತ್ತಮ. ಬದಲಾಗಿ ಪೂರ್ವ ಅಥವಾ ದಕ್ಷಿಣಕ್ಕೆ ಪಾದಗಳನ್ನು ಇಟ್ಟು ಮಲಗುವುದು ಅಥವಾ ಪಶ್ಚಿಮ ಮತ್ತು ಉತ್ತರಕ್ಕೆ ತಲೆಯಿಟ್ಟು ಮಲಗುವುದರಿಂದ ಬಹಳಷ್ಟು ಹಾನಿ ಉಂಟು ಮಾಡಬಹುದು. ಇದರ ಹಿಂದಿನ ಕಾರಣವನ್ನು ವಾಸ್ತು ಶಾಸ್ತ್ರ ಹೇಳಲಾಗಿದೆ. ಆ ಪ್ರಕಾರ, ದಕ್ಷಿಣ ದಿಕ್ಕನ್ನು ಯಮ ಮತ್ತು ನಕಾರಾತ್ಮಕ ಶಕ್ತಿಗಳ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಬದಿಗೆ ಪಾದಗಳನ್ನು ಇಟ್ಟು ಮಲಗುವುದು ಅನೇಕ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆಯಂತೆ. ಹಾಗೆಯೇ ಪೂರ್ವದಲ್ಲಿ ಅಂದರೆ ಸೂರ್ಯ ಉದಯಿಸುವ ದಿಕ್ಕಿನಲ್ಲಿ ಪಾದಗಳನ್ನು ಇಟ್ಟು ಮಲಗುವುದು ಕೂಡಾ ತುಂಬಾ ಅಶುಭ. ಇದು ಜೀವನದಲ್ಲಿ ಅನೇಕ ಅಡೆತಡೆಗಳನ್ನು ತರುವುದಲ್ಲದೇ, ಯಾವುದೇ ರೀತಿಯ ಏಳಿಗೆ ಕಾಣದೇ ಇರುವಂತೆ ಮಾಡುತ್ತದೆ.
ವೈಜ್ಞಾನಿಕವಾಗಿ ಮಲಗಲು ಸರಿಯಾದ ದಿಕ್ಕು:
ದಕ್ಷಿಣಕ್ಕೆ ತಲೆ ಇಟ್ಟು ಮಲಗಬಾರದು ಅನ್ನೋದನ್ನು ವೈಜ್ಞಾನಿಕ ಕಾರಣವೂ ಇದೆ. ಆ ಪ್ರಕಾರ ನೋಡೋದಾದ್ರೆ, ವಾಸ್ತವವಾಗಿ ಭೂಮಿಯಲ್ಲಿ ಕಾಂತೀಯ ಶಕ್ತಿ ಇದೆ. ಕಾಂತೀಯ ಪ್ರವಾಹವು ದಕ್ಷಿಣದಿಂದ ಉತ್ತರದ ಕಡೆಗೆ ನಿರಂತರವಾಗಿ ಹರಿಯುತ್ತದೆ. ನಾವು ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗಿದಾಗ, ಈ ಶಕ್ತಿಯು ನಮ್ಮ ತಲೆಯ ಭಾಗದಿಂದ ಪ್ರವೇಶಿಸಿ, ಪಾದಗಳ ಕಡೆಯಿಂದ ಹೊರಬರುತ್ತದೆ. ಅಥವಾ ಪಾದಗಳ ಮೂಲಕ ಪ್ರವೇಶಿಸಿ, ತಲೆಯಿಂದ ನಿರ್ಗಮಿಸುತ್ತದೆ. ಹೀಗಾದಾಗ ಇದು ನಮ್ಮಲ್ಲಿ ಒತ್ತಡವನ್ನು ಹೆಚ್ಚಿಸಿ, ಅನೇಕ ರೋಗಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ ಬೆಳಿಗ್ಗೆ ಎದ್ದ ನಂತರ, ವ್ಯಕ್ತಿಗೆ ಸುಸ್ತಾಗಿರುವಂತೆ ಮತ್ತು ಶಕ್ತಿಹೀನತೆಯ ಅನುಭವವಾಗುತ್ತದೆ. ಆದ್ದರಿಂದ ಯಾವಾಗಲೂ ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ಆರೋಗ್ಯ ಹಾಗೂ ವಾಸ್ತುವಿನ ದೃಷ್ಟಿಯಿಂದ ಉತ್ತಮವಾಗಿರುತ್ತದೆ.