ಕೊಚ್ಚಿ: ಸಿಡ್ಕೊ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಐದೂವರೆ ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ.
ಟೆಲಿಕಾಂ ಸಿಟಿ ಯೋಜನೆಯ ನೆಪದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಅಕ್ರಮದ ವಿರುದ್ದ ಈ ಕ್ರಮ ಜರುಗಿಸಲಾಗಿದೆ. ಮೊನ್ನೆ ಕಪ್ಪುಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಮಾಜಿ ಸಿಡ್ಕೋ ಎಂಡಿ ಸಾಜಿ ಬಶೀರ್ ಮತ್ತು ಇತರರನ್ನು ಪ್ರಶ್ನಿಸಿತ್ತು.
ಇಡಿ ಸಜಿ ಬಶೀರ್, ಅವರ ಪತ್ನಿ ಅನುಷಾ ಮತ್ತು ತಾಯಿ ಲೀಸಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಕೊಚ್ಚಿಯಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಹಲವು ಭ್ರμÁ್ಟಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಾಜಿ ಬಶೀರ್ ವಿರುದ್ಧ 15 ವಿಜಿಲೆನ್ಸ್ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ.
ಸಾಜಿ ಬಶೀರ್ ವಿರುದ್ಧ ಸಿಡ್ಕೋ ಮತ್ತು ಕೆಎಸ್‍ಇಬಿಯಲ್ಲಿ ಅಕ್ರಮ ನೇಮಕಾತಿ, ಬಂದರು ಇಲಾಖೆ ನಿರ್ದೇಶಕರಾಗಿದ್ದಾಗ ಡ್ರೆಚರ್ ಖರೀದಿಯಲ್ಲಿ ಅವ್ಯವಹಾರ, ಮೆಣಂಕುಳಂನ ಸರ್ಕಾರಿ ಭೂಮಿಯಿಂದ ಅಕ್ರಮ ಮರಳು ಸಾಗಣೆ, ಕಡವಂತರ ಜಮೀನು ವರ್ಗಾವಣೆ, ಹಸ್ತಾಂತರ ಸೇರಿದಂತೆ ಹಲವು ಪ್ರಕರಣಗಳಿವೆ. ಸರ್ಕಾರಿ ಭೂಮಿ ತನ್ನ ಹೆಸರಿಗೆ ಬರೆಸಿಕೊಂಡ ಅಕ್ರಮದ ದೂರು ದಾಖಲಾಗಿದೆ.
ಅಕ್ರಮ ಮರಳು ಗಣಿಗಾರಿಕೆ; ಕೇರಳ ಸಿಡ್ಕೋ ಆಸ್ತಿಯನ್ನು ವಶಪಡಿಸಿದ ಇ.ಡಿ.
0
ಏಪ್ರಿಲ್ 03, 2023