ಹಬ್ಬದ ಹುರುಪು: ಕುಂಬಳೆಯಲ್ಲಿ ವಾಣಿಜ್ಯ ವಲಯದಲ್ಲಿ ಭಾರೀ ರಶ್
0
ಏಪ್ರಿಲ್ 16, 2023
ಕುಂಬಳೆ: ರಂಜಾನ್ ಹಬ್ಬಕ್ಕೆ ನಾಲ್ಕು ದಿನ ಉಳಿದಿರುವಂತೆ ಕುಂಬಳೆ ಬಟ್ಟೆ ಮಳಿಗೆಗಳಲ್ಲಿ ತೀವ್ರ ಜನಸಂದಣಿ ಕಂಡುಬಂದಿದ್ದು ವ್ಯಾಪಾರಿಗಳು ಟ್ರೆಂಡ್ ಗೆ ತಕ್ಕಂತೆ ಬಟ್ಟೆ ತಂದು ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ರಂಜಾನ್‍ನಲ್ಲಿ ಕುಂಬಳೆ ವ್ಯಾಪಾರ ವಲಯದಲ್ಲಿ ಹೊಸ ದಾಖಲೆ ಬರೆಯಲಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕುಂಬಳೆಯಲ್ಲಿ ವಿಪರೀತ ಜನಸಂದಣಿ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ವ್ಯಾಪಾರಿಗಳು ಮಕ್ಕಳು, ಮಹಿಳೆಯರು ಮತ್ತು ಯುವಕರಿಗೆ ಹೊಸ ಟ್ರೆಂಡಿ ಬಟ್ಟೆ ಮತ್ತು ಶೂಗಳನ್ನು ವಿಕ್ರಯಿಸಲು ತಂದಿರಿಸಿದ್ದಾರೆ. ರಂಜಾನ್ ಅರ್ಧ ದಾಟಿದಾಗಲೇ ಜನಸಂಂದಣಿ ಶುರುವಾಗಿತ್ತು. ಜೊತೆಗೆ ವಿಷು ಹಬ್ಬದ ಸಂದಣಿಯೂ ಸೇರಿಕೊಂಡಿತು.
ಅಂತೆಯೇ, ಬೇಕರಿ ವ್ಯಾಪಾರಿಗಳು ಹಬ್ಬದ ಸಿಹಿತಿಂಡಿಗಳ (ಬ್ರೆಡ್) ಭಾರಿ ದಾಸ್ತಾನು ತಂದಿದ್ದಾರೆ. ಇಲ್ಲಿಯೂ ತುಂಬಾ ಜನಸಂದಣಿ ಕಂಡುಬಂದಿದೆ. ಗೃಹಿಣಿಯರು ಮನೆಯಲ್ಲಿ ಅಸಹನೀಯ ಸೆಕೆಯಿಂದ ಬಳಲಿರುವ ಕಾರಣ ಹಬ್ಬದ ಸಿಹಿತಿಂಡಿಗಳನ್ನು ಮಾಡುವುದರಿಂದ ದೂರವಿದ್ದು, ಬೇಕರಿಗಳು ಸಿಹಿತಿಂಡಿಗಳ ವ್ಯವಹಾರದ ಏರುಗತಿಗೆ ಕಾರಣವಾಗಿದೆ.
Tags