ಕಾಸರಗೋಡು: ಕುಡ್ಲು ಪಾಯಿಚ್ಚಾಲ್ ಚೈತನ್ಯ ಟ್ರಸ್ಟ್ (ರಿ), ಋಷಿಕ್ಷೇತ್ರ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವ ಚೈತನ್ಯ ವಿದ್ಯಾಲಯದಲ್ಲಿಕಲಿಯುತ್ತಿರುವ ಆರ್ಥಿಕವಾಗಿ ದುರ್ಬಲರಾಗಿರುವ ಮಕ್ಕಳಪೋಷಕರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕೊಡುಗೈ ದಾನಿಗಳಾದ ಟ್ರಸ್ಟಿನ ಹಿತೈಷಿಗಳಿಂದ ಸಂಗ್ರಹಿಸಿರುವ ಏಳು ಲಕ್ಷ ಮಿಕ್ಕಿದ ಧನ ಸಹಾಯವನ್ನು ಚೈತನ್ಯವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.
ವಿದ್ಯಾಲಯದ ಪ್ರಬಂಧಕ ನಾಗೇಶ್ ಬಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿಆಡಳಿತಾಧಿಕಾರಿಗಳಾದ ರಮೇಶ್ ಕೆ, ಚೈತನ್ಯ ಶಿಶುವಿಹಾರ ಮುಖ್ಯಸ್ಥೆ ರೂಪ ಕೆ ಪಿ ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಮೋಹನ ಎಂ ಸ್ವಾಗತಿಸಿದರು. ವಿದ್ಯಾಲಯ ಪ್ರಾಂಶುಪಾಲೆ ಪುಷ್ಪಲತಾ ಎಸ್.ಎಂ. ವಂದಿಸಿದರು. ಶಾಲೆಯ 98ರಷ್ಟು ಪೋಷಕರು ಸಹಾಯಧನದ ಪ್ರಯೋಜನವನ್ನು ಪಡೆದುಕೊಂಡರು.
ಚೈತನ್ಯ ವಿದ್ಯಾಲಯದ ವಿದ್ಯಾರ್ಥಿಗಳ ಪೋಷಕರಿಗೆ ಧನಸಹಾಯ
0
ಏಪ್ರಿಲ್ 03, 2023