ಪೆರ್ಲ: 2022-23ನೇ ಆರ್ಥಿಕ ವರ್ಷದ ತೆರಿಗೆ ಸಂಗ್ರಹ ಕಾರ್ಯದಲ್ಲಿ ನೂರು ಶೇಕಡಾ ಸಂಗ್ರಹಣೆಯೊಂದಿಗೆ ಎಣ್ಮಕಜೆ ಗ್ರಾಮ ಪಂಚಾಯತಿ ಹೊಸ ದಾಖಲೆ ಸೃಷ್ಠಿಸಿದೆ. ಪಂಚಾಯತಿ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ನೂರು ಶೇಕಡಾ ತೆರಿಗೆ ಸಂಗ್ರಹ ಯಶಸ್ವಿಯಾಗಿ ನಡೆದಿದ್ದು ಮಂಜೇಶ್ವರ ತಾಲೂಕಿನಲ್ಲಿಯೇ ತೆರಿಗೆ ವಸೂಲಾತಿಯಲ್ಲಿ ಅಗ್ರ ಶ್ರೇಯಾಂಕ ದಾಖಲಿಸಿದೆ. ಪಂಚಾಯತಿ ಜನಪ್ರತಿನಿಧಿಗಳು ಹಾಗೂ ಉದ್ಯೋಗಸ್ಥರನ್ನು ಒಳಗೊಳ್ಳಿಸಿ "ಟಾಸ್ಕ್ ಪೋರ್ಸ್" ಎಂಬ ವಿಶೇಷ ತಂಡ ರಚಿಸಿ ತೆರಿಗೆ ಸಂಗ್ರಹಣಾ ಕಾರ್ಯ ನಡೆಸಲಾಗಿತ್ತು. ಸುಮಾರು 35 ಲಕ್ಷ ರೂಗಳಷ್ಟು ತೆರಿಗೆ ಹಣ ಸಂಗ್ರಹವಾಗಿದ್ದು ಇದಕ್ಕಾಗಿ ಶ್ರಮಿಸಿದ ಉದ್ಯೋಗಸ್ಥರನ್ನು ಹಾಗೂ ಸಹಕರಿಸಿದ ತೆರಿಗೆದಾರರನ್ನು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.,ಕಾರ್ಯದರ್ಶಿ ಸುನಿಲ್ ಆರ್ ಅಭಿನಂದಿಸಿದ್ದಾರೆ.
ಎಣ್ಮಕಜೆ ಗ್ರಾಮ ಪಂಚಾಯತಿ ನೂರು ಶೇಕಡಾ ತೆರಿಗೆ ಸಂಗ್ರಹದ ದಾಖಲೆ
0
ಏಪ್ರಿಲ್ 06, 2023