ಮುಳ್ಳೇರಿಯ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 29 ವರ್ಷಗಳ ಕಾಲ ಸುದೀರ್ಘ ಸೇವೆಯ ಬಳಿಕ ನಿವೃತ್ತರಾಗುತ್ತಿರುವ ಇಂಗ್ಲೀಷ್ ಅಧ್ಯಾಪಕ ಗಣೇಶ ಶರ್ಮ ಅವರಿಗೆ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ಜರಗಿತು.
ಪ್ರಾಂಶುಪಾಲ ಸತೀಶ್ ವೈ. ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸನ್ಮಾನವನ್ನು ಸ್ವೀಕರಿಸಿ ಗಣೇಶ ಶರ್ಮ ಅವರು ಮಾತನಾಡಿ ಕಾಸರಗೋಡಿನ ಕನ್ನಡದ ಕಂಪು ನಾಡಿನಾದ್ಯಂತ ಪಸರಿಸಲು ನಾವೆಲ್ಲಾ ಶ್ರಮಪಡಬೇಕು. ಗಡಿನಾಡು ಕನ್ನಡನಾಡಾಗಿರಬೇಕು. ಸುಂದರವಾದ ಪರಿಸರದಲ್ಲಿ 29 ವರ್ಷಗಳ ಕಾಲ ಸೇವೆಯನ್ನು ನೀಡಿರುವುದು ಮನಸ್ಸಿಗೆ ತುಂಬಾ ಸಂತೋಷವನ್ನು ನೀಡಿದೆ. ಈ ಶಾಲೆಯ ನೆನಪು ಸದಾ ಹಸಿರಾಗಿರಲಿದೆ ಎಂದರು. ಯುಪಿ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್, ಅಧ್ಯಾಪಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಧ್ಯಾಪಕ ಬಾಲಚಂದ್ರ ಸಿ. ನಿರೂಪಿಸಿದರು. ಮುಖ್ಯೋಪಾಧ್ಯಾಯ ಗಿರೀಶ್ ವೈ ಸ್ವಾಗತಿಸಿ, ಅಧ್ಯಾಪಕ ರಾಜಶೇಖರ ಪಿ. ವಂದಿಸಿದರು.
ಕಾಸರಗೋಡಿನ ಕನ್ನಡದ ಕಂಪು ನಾಡಿನಾದ್ಯಂತ ಪಸರಿಸಲಿ: ಅಗಲ್ಪಾಡಿ ಶಾಲೆಯ ವಿದಾಯ ಕೂಟದಲ್ಲಿ ಗಣೇಶ್ ಶರ್ಮ
0
ಏಪ್ರಿಲ್ 01, 2023