ಕಾಸರಗೋಡು: ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಪೌರಾಣಿಕ ಕಥೆಯನ್ನು ಒಳಗೊಂಡಿರುವ ಪುಸ್ತಕವನ್ನು ಇದೇ ಮೊದಲಬಾರಿಗೆ ಮಲಯಾಳದಲ್ಲಿ ಪ್ರಕಟಿಸಲಾಗಿದೆ. ಪುಸ್ತಕದ ಬಿಡುಗಡೆ ಸಮಾರಂಭ ಮೇ 14 ರಂದು ಕಾಞಂಗಾಡ್ ಪ್ರೆಸ್ ಫಾರಂ ಸಭಾಂಗಣದಲ್ಲಿ ನಡೆಯಲಿದೆ. ಪತ್ರಕರ್ತ ಮತ್ತು ಬರಹಗಾರ ಟಿ.ಕೆ.ಪ್ರಭಾಕರ ಕುಮಾರ್ ಅವರು 'ಪಂಜುರ್ಲಿ ಮತ್ತು ಕರಿಚಾಮುಂಡಿ ವಿಶೇಷ ದೈವಗಳು'ಎಂಬ ಹೆಸರಲ್ಲಿ ಈ ಪುಸ್ತಕ ಪ್ರಕಟಿಸಿದ್ದಾರೆ.
ಸಂಕಲನದಲ್ಲಿ ಸಾಮಾಜಿಕ ಅನೀತಿ ವಿರುದ್ಧ ಹೋರಾಡಿದ ಅಣ್ಣಪ್ಪನ ಕೆಚ್ಚೆದೆಯ ಜೀವನ ಚರಿತ್ರೆಯನ್ನು ಇಲ್ಲಿ ದಾಖಲಿಸಲಾಗಿದೆ. ನಂತರ ಅಣ್ಣಪ್ಪ ಪಂಜುರ್ಲಿ ಎಂಬ ದೈವವಾಗಿ ತುಳುನಾಡಿನಲ್ಲಿ ಕಾರಣಿಕ ಮೆರೆದ ದೈವದ ಬಗ್ಗೆ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ. ಅದೇ ರೀತಿ ಪಂಜುರ್ಲಿ, ಕರಿಂಚಾಮುಂಡಿ ಮೊದಲಾದ ದೈವಗಳಿಗೆ ಸಂಬಂಧಿಸಿದ ಐತಿಹ್ಯಗಳು ಪುಸ್ತಕದಲ್ಲಿದೆ. ಇದು ಟಿ.ಕೆ.ಪ್ರಭಾಕರಕುಮಾರ್ ಅವರ ಎರಡನೇ ಸಂಗ್ರಹ ಕೃತಿಯಾಗಿದೆ.