ಕೋಝಿಕ್ಕೋಡ್: ಚಲಿಸುತ್ತಿದ್ದ ರೈಲಿನೊಳಗೆ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿದ್ವಂಸಕ ಕೃತ್ಯ ನಡೆಸಿದ ಘಟನೆ ನಡೆದಿದ್ದು ತೀವ್ರ ಆತಂಕ ಮೂಡಿಸಿದೆ. ಈ ವೇಳೆ ರೈಲಿನಿಂದ ಹಾರಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.
ಕೋಝಿಕ್ಕೋಡ್‍ನ ಚಲಿಯಾಂ ನಿವಾಸಿಗಳಾದ ಶುಹೈಬ್ ಮತ್ತು ಜಸೀಲಾ ದಂಪತಿಯ ಪುತ್ರಿ ಸಹ್ಲಾ (ಎರಡು ವರ್ಷ) ಮತ್ತು ಜಸೀಲಾ ಅವರ ಸಹೋದರಿ ಕಣ್ಣೂರು ಮಟ್ಟನೂರು ಪಲ್ಲೋಟುಪಲ್ಲಿ ಬದ್ರಿಯಾ ಮನ್ಸಿಲ್‍ನ ರಹಮತ್ (45) ಮೃತರು. ಇನ್ನೊಂದು ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಏಲತ್ತೂರು ಕೊರಪುಳ ಸೇತುವೆ ಬಳಿಯ ರೈಲ್ವೆ ಹಳಿಯಲ್ಲಿ ಮೃತ ದೇಹಗಳು ಪತ್ತೆಯಾಗಿವೆ. ರೈಲಿನಲ್ಲಿದ್ದ ಎಂಟು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಐವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ, ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಹಾಗೂ ಒಬ್ಬರನ್ನು ಕೊಯಿಲಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ರಾತ್ರಿ 9.15ಕ್ಕೆ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ರೈಲಿನ ಡಿ1 ಕಂಪಾರ್ಟ್‍ಮೆಂಟ್‍ನಲ್ಲಿ ದಾಳಿ ನಡೆದಿದೆ. ಏಲತ್ತೂರು ನಿಲ್ದಾಣದ ನಂತರ ಕೊರಪುಳ ಸೇತುವೆ ಬಳಿಗೆ ಬಂದಾಗ ದುಷ್ಕರ್ಮಿಗಳು ಪೆಟ್ರೋಲ್ ತುಂಬಿಸಿದ ಕ್ಯಾನಗಳಿಂದ ಪ್ರಯಾಣಿಕರ ಮೇಲೆ ಎರಚಿ ಬೆಂಕಿ ಹಚ್ಚಿದ್ದಾರೆ ಎಂದು ಕಂಪಾರ್ಟ್‍ಮೆಂಟ್‍ನಲ್ಲಿದ್ದವರು ತಿಳಿಸಿದ್ದಾರೆ. ಇತರ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿದರು.
ಮೊದಲಿಗೆ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಭಾವಿಸಲಾಗಿತ್ತು. ಇದು ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿತು. ಸೇತುವೆ ಮೇಲೆ ರೈಲು ನಿಂತಿದ್ದರಿಂದ ಸುಟ್ಟು ಕರಕಲಾದ ಜನರನ್ನು ಹೊರತರಲು ಸಾಕಷ್ಟು ಶ್ರಮ ಪಡಬೇಕಾಯಿತು. ಅವುಗಳನ್ನು ಡಿ 1 ಕಂಪಾರ್ಟ್‍ಮೆಂಟ್‍ನಿಂದ ಇತರ ವಿಭಾಗಗಳ ಮೂಲಕ ಹೊರತರಲಾಯಿತು.
ದಾಳಿಕೋರನಿಗೆ ಸೇರಿದ್ದೆಂದು ಶಂಕಿಸಲಾದ ಚೀಲ ಪತ್ತೆ: ಇಂಧನ ಬಾಟಲಿ ಮತ್ತು ಹಿಂದಿ ಪುಸ್ತಕಗಳು, ಎರಡು ಫೆÇೀನ್: ಪೂರ್ವ ಯೋಜಿತ: ಪೊಲೀಸರು
ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಯದ್ದೆಂದು ಎಂದು ಶಂಕಿಸಲಾದ ಬ್ಯಾಗ್ ಪತ್ತೆಯಾಗಿದೆ.
ದಾಳಿಕೋರನ ಬ್ಯಾಗ್ ಟ್ರ್ಯಾಕ್ ಮೇಲೆ ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಪೆÇಲೀಸರು ಬ್ಯಾಗ್‍ನಿಂದ ಅರ್ಧ ಬಾಟಲಿ ಪೆಟ್ರೋಲ್ ತರಹದ ವಸ್ತು, ಹಿಂದಿ ಪುಸ್ತಕಗಳು ಮತ್ತು ಎರಡು ಪೊನ್‍ಗಳನ್ನು ಪತ್ತೆ ಮಾಡಿದ್ದಾರೆ. ಘಟನೆ ಪೂರ್ವ ಯೋಜಿತ ಎಂದು ಪೆÇಲೀಸರು ಪ್ರಾಥಮಿಕ ತೀರ್ಮಾನಕ್ಕೆ ಬಂದಿದ್ದಾರೆ.
ವ್ಯಕ್ತಿಯೋರ್ವ ಸಹ ಪ್ರಯಾಣಿಕರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬೈಕ್ ನಲ್ಲಿ ಪರಾರಿಯಾಗಿರುವ ದೃಶ್ಯಾವಳಿ ಪೊಲೀಸರಿಗೆ ಸಿಕ್ಕಿದೆ. ದಾಳಿಯ ನಂತರ ದುಷ್ಕರ್ಮಿ ರೈಲ್ವೇ ಹಳಿ ಬದಿಗೆ ಇಳಿದು ಬೈಕ್‍ನಲ್ಲಿ ಪರಾರಿಯಾಗಿದ್ದಾನೆ. ವ್ಯಕ್ತಿಯೊಬ್ಬ ಬೈಕ್‍ನೊಂದಿಗೆ ಆಗಮಿಸಿ ದಾಳಿಕೋರನನ್ನು ಹತ್ತಿಸಿಕೊಂಡು ತೆರಳುವ ದೃಶ್ಯಾವಳಿಗಳನ್ನು ಪಡೆದ ನಂತರ ದಾಳಿಯನ್ನು ಯೋಜಿಸಲಾಗಿದೆ ಎಂಬ ತೀರ್ಮಾನಕ್ಕೆ ಪೆÇಲೀಸರು ಬಂದಿದ್ದಾರೆ. ಬೆಂಕಿ ಹಚ್ಚಿದ ದುಷ್ಕರ್ಮಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಏತನ್ಮಧ್ಯೆ, ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್ ರೈಲಿನ ಪ್ರಯಾಣಿಕರ ಮೇಲೆ ಹಿಂಸಾಚಾರದ ನಂತರ ಕಾಣೆಯಾದ ಮಹಿಳೆ ಮತ್ತು ಆಕೆಯ ಮಗು ಶವವಾಗಿ ಪತ್ತೆಯಾಗಿದೆ. ಮೃತರನ್ನು ಕೋಝಿಕ್ಕೋಡ್‍ನ ಚಲಿಯಾಂ ನಿವಾಸಿಗಳಾದ ಶುಹೈಬ್ ಮತ್ತು ಜಸೀಲಾ ದಂಪತಿಯ ಪುತ್ರಿ ಸಹ್ಲಾ (ಎರಡು ವರ್ಷ), ಮತ್ತು ಜಸೀಲಾ ಅವರ ಸಹೋದರಿ ರಹಮತ್ (45), ಕಣ್ಣೂರು, ಪಲ್ಲೋಟುಪಲ್ಲಿ, ಬದ್ರಿಯಾ ಮನ್ಸಿಲ್ ನ ಮಟ್ಟನ್ನೂರು ರಹಮತ್ (45) ಎಂದು ಗುರುತಿಸಲಾಗಿದೆ. ರಹಮತ್ ಅವರ ಸಹೋದರಿ ತನ್ನ ಪುತ್ರಿಯ ಶಿಕ್ಷಕರ ತರಬೇತಿ ಕೋರ್ಸ್‍ಗೆ ಸೇರಿದ್ದರಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಇಬ್ಬರ ಮೃತದೇಹಗಳನ್ನು ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಏಲತ್ತೂರು ನಿಲ್ದಾಣ ಮತ್ತು ಕೊರಪುಳ ಸೇತುವೆ ನಡುವೆ ಮೃತದೇಹಗಳು ಪತ್ತೆಯಾಗಿವೆ.
ಹಿಂದಿನ ದಿನ ಸುಟ್ಟಗಾಯಗಳಾಗಿ ಕೊಯಿಲಾಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಸಿಖ್, ತನ್ನೊಂದಿಗಿದ್ದ ಮಹಿಳೆ ಮತ್ತು ಮಗು ಕಾಣೆಯಾಗಿದ್ದಾರೆ ಎಂದು ಈ ಹಿಂದೆ ದೂರು ನೀಡಿದ್ದರು. ಇದರೊಂದಿಗೆ ಪೆÇಲೀಸರು ದಾಳಿಕೋರನ ಜೊತೆಗೆ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗಾಬರಿಗೊಂಡು ರೈಲಿನಿಂದ ಹಾರಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೂವರ ಮೃತದೇಹಗಳು ಕೊರಪುಳ ಸೇತುವೆಯಿಂದ ಅನತಿ ದೂರದಲ್ಲಿ ಪತ್ತೆಯಾಗಿವೆ. ಅಪರಿಚಿತ ವ್ಯಕ್ತಿಯೊಬ್ಬ, ಸಾಧಾರಣ ಮೈಕಟ್ಟು ಹೊಂದಿದ್ದ ಮಧ್ಯವಯಸ್ಕ, ಕೆಂಪು ಅಂಗಿ ಮತ್ತು ಕ್ಯಾಪ್ ಧರಿಸಿ, ಕಾಯ್ದಿರಿಸಿದ ಕಂಪಾರ್ಟ್‍ಮೆಂಟ್‍ಗೆ ನುಗ್ಗಿ ಪ್ರಯಾಣಿಕರ ದೇಹಕ್ಕೆ ಇಂಧನ ಸುರಿದು ಬೆಂಕಿ ಹಚ್ಚಿದ. ಆದರೆ ಹೆಚ್ಚು ಪ್ರಯಾಣಿಕರು ಇಲ್ಲದ ಕಂಪಾರ್ಟ್‍ಮೆಂಟ್‍ನಲ್ಲಿ ಅಪರಿಚಿತ ವ್ಯಕ್ತಿಯ ಅತಿಕ್ರಮಣ ನಡೆದಿದೆ. ಘಟನೆಯಲ್ಲಿ ಎಂಟು ಮಂದಿ ಸುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.