ಕಾಸರಗೋಡು: ಕೇರಳ ರಾಜ್ಯ ಕೋಟೆಯವರ ಯಾನೆ ಕೋಟೆಗಾರರ ಯುವಕ ಮತ್ತು ಮಹಿಳಾ ಸಂಘದನೇತೃತ್ವದಲ್ಲಿಕಣ್ಣಿನ ಉಚಿತ ತಪಾಸಣಾ ಶಿಬಿರ ಮೀಪುಗುರಿಯಲ್ಲಿನ ಸಂಘದ ಸ್ಥಳದಲ್ಲಿ ಜರಗಿತು. ಪ್ರಸಾದ್ ನೇತ್ರಾಲಯ ಸೂಪರ್ ಸ್ಪಷಾಲಿಟಿ ಐ ಹೋಸ್ಪಿಟಲ್ ಮಂಗಳೂರು ಮತ್ತು ಡಾ. ದಯಾನಂದ ಪೈಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿತ್ತು.
ಪ್ರಸಾದ್ ನೇತ್ರಾಲಯದ ಡಾ. ವೃಂದಾ ಕಾಞಂಗಾಡ್ ಶಿಬಿರ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೆ. ವಿಶನಾಥ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಿಕ್ಷುಲಕ್ಷ್ಮಣಾನಂದ ಸ್ವಾಮೀಜಿ ಸೇವಾ ಸಮಾಜದ ಅದ್ಯಕ್ಷ ಲಕ್ಷ್ಮಣ ಬೀರಂತಬೈಲ್ ಮುಖ್ಯ ಅತಿಥಿಗಳಾಗಿಭಾಗವಸಿದರು. ಜಯಪ್ರಕಾಶ್ ಕುಂಬ್ಲೆ. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ,ಕಾಸರಗೋಡು ಇದರ ಅಧ್ಯಕ್ಷ ಶಿವರಾಮಕಾಸರಗೋಡು ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 226 ಮಂದಿ ಭಾಗವಹಿಸಿದ್ದು, ಪ್ರಸಾದ್ ನೇತ್ರಾಲಯ ವತಿಯಿಂದ 149ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಯಿತು. ದಿನೇಶ ಅಣಂಗೂರುಮತ್ತು ರಾಜ್ ಮೋಹನ್ ಕೋಟೆಕಣಿ ಅವರ ಸಹಕಾÀರದಿಂದ 150ಕ್ಕೂ ಹೆಚ್ಚು ಮಂದಿಯ ಮಧು ಮೇಹ ಮತ್ತು ರಕ್ತದೊತ್ತಡದ ತಪಾಸಣೆ ನಡೆಸಲಾಯಿತು. ಲಲಿತಾಕೇಶವ ಸ್ವಾಗತಿಸಿದರು. ದಿನೇಶ್ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ನಂದಿನಿ ದಿವಾಕರ ವಂದಿಸಿದರು.
ಕೋಟೆಗಾರರ ಯುವಕ ಮಹಿಳಾ ಸಂಘದ ನೇತೃತ್ವದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ
0
ಏಪ್ರಿಲ್ 06, 2023