ಪೆರ್ಲ: ಮತೀಯ ಸಾಮರಸ್ಯ ಹಾಗೂ ಏಕತೆಯ ಸಂದೇಶದೊಂದಿಗೆ ಎಣ್ಮಕಜೆ ಗ್ರಾಮ ಪಂಚಾಯತ್ ಹಾಗೂ ಉದ್ಯೋಗಿಗಳು ಸಂಯುಕ್ತವಾಗಿ ಆಯೋಜಿಸಿದ ಸಾಮೂಹಿಕ ಇಫ್ತಾರ್ ಕೂಟ ಗಮನಾರ್ಹವಾಯಿತು. ಔದ್ಯೋಗಿಕ ನೆಲೆಯಲ್ಲಿ ನಡೆದ ಇಫ್ತಾರ್ ಕೂಟವನ್ನು ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸಿದ್ದರು.
ಪಂ.ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌಧಾಭಿ ಹನೀಫ್, ಗ್ರಾಮ ಪಂಚಾಯತು ಸದಸ್ಯರಾದ ಮಹೇಶ್ ಭಟ್, ಕುಸುಮಾವತಿ, ರಾಮಚಂದ್ರ, ಶಶಿಧರ,ಧಾರ್ಮಿಕ ಮುಖಂಡರಾದ ಸದಾನಂದ ರೈ ಕುದ್ವ, ಫಾದರ್ ಜೋಸ್ ಚೆಂಬೊಟ್ಟಿಕಲ್, ಆಯಿμÁ ಎ.ಎ. ಮೊದಲಾದವರು ಭಾಗವಹಿಸಿದ್ದರು.